ಬೆಳ್ತಂಗಡಿ: ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ (SSF) ಕರ್ನಾಟಕ ಬ್ಲಡ್ ಸೈಬೋ ಇದರ 330ನೇ ಮಹತ್ವದ ರಕ್ತದಾನ ಶಿಬಿರವನ್ನು SSF ಬೆಳ್ತಂಗಡಿ ಸೆಕ್ಟರ್ ವತಿಯಿಂದ, ಮರ್ಹೂಂ ಶಾಝಿನ್ ಮುರ ಅವರ ಸ್ಮರಣಾರ್ಥವಾಗಿ, 23 ಫೆಬ್ರವರಿ 2025, ಭಾನುವಾರ ಬೆಳ್ತಂಗಡಿ ತಾಲೂಕಿನ ಲಾೖಲ ಗ್ರಾಮ ಪಂಚಾಯತ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಶಿಬಿರವನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾಯಿತು.
“SHARE LIFE, DONATE BLOOD” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ ಈ ಶಿಬಿರದಲ್ಲಿ SSF ಕರ್ನಾಟಕ ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರು, SSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ನಾಯಕರುಗಳಾದ ನವಾಝ್ ಮಾವಿನಕಟ್ಟೆ, ಮುಬಿನ್ ಉಜಿರೆ, ಲತೀಫ್ ಅಹ್ಸನಿ ಮಲೆಬೆಟ್ಟು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಸಲೀಂ ಮುರ, SYS ಬೆಳ್ತಂಗಡಿ ಸರ್ಕಲ್ ಅಧ್ಯಕ್ಷರಾದ ಝಮೀರ್ ಸಅದಿ ಲಾಯಿಲ, SSF ಬೆಳ್ತಂಗಡಿ ಡಿವಿಷನ್ ನಾಯಕರುಗಳಾದ ಇಸಾಕ್ ಅಳದಂಗಡಿ, ನಾಸಿರ್ ಪಡ್ಡಂದಡ್ಕ, ಬಾತಿಷ್ ಮುಈನಿ, ಫಯಾಝ್ ಗೇರುಕಟ್ಟೆ, SYS ಲಾಯಿಲ ಶಾಖೆಯ ಅಧ್ಯಕ್ಷರಾದ ರಫೀಕ್ ಲಾಯಿಲ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದರು.
SSF ಬೆಳ್ತಂಗಡಿ ಸೆಕ್ಟರ್ ಅಧ್ಯಕ್ಷರಾದ ಬಾಸಿತ್ ಹಿಮಾಮಿ, ಉಪಾಧ್ಯಕ್ಷರಾದ ಇರ್ಷಾದ್ ಕೊಯ್ಯೂರು, ಪ್ರಧಾನ ಕಾರ್ಯದರ್ಶಿ ಶಮೀರ್ ಲಾಯಿಲ, ಕ್ಯಾಬಿನೆಟ್ ಸದಸ್ಯರು ಹಾಗೂ SYS, KMJ, SJM, SMA ನಾಯಕರು, ತೇಜಸ್ವಿನಿ ಆಸ್ಪತ್ರೆಯ ಸಿಬ್ಬಂದಿ ವರ್ಗವು ಶಿಬಿರವನ್ನು ಯಶಸ್ವಿಗೊಳಿಸಲು ಶ್ರಮಿಸಿದರು. ಶಿಬಿರದಲ್ಲಿ ಅನೇಕ ಯುವಕರು, ಸಮಾಜ ಸೇವಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.
SSF ಕರ್ನಾಟಕ ಬ್ಲಡ್ ಸೈಬೋ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದುವರೆಗೆ ಹಲವಾರು ರೋಗಿಗಳಿಗೆ ರಕ್ತವನ್ನು ಪೂರೈಸುವಲ್ಲಿ ಯಶಸ್ಸು ಕಂಡಿದೆ.





m
