Featured, ಅಂಕಣ, ಸ್ಥಳೀಯ

ಸೂರಿಕುಮೇರು : ರಂಝಾನ್ ಪೂರ್ವ ಸಿದ್ದತಾ ತರಗತಿ ಮತ್ತು ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ

ಅಲ್ಲಾಹನನ್ನು ಭಯಪಟ್ಟು ಜೀವಿಸಿರಿ ಸಂಕಷ್ಟಗಳು ದೂರವಾಗುತ್ತದೆ: ಬಹು| ಫಾರೂಕ್ ಹನೀಫಿ ಪರ್ಲೊಟ್ಟು

ಮಾಣಿ : ಕಡ್ಡಾಯ ಆರಾಧನಾ ಕರ್ಮಗಳನ್ನು ನಿರ್ವಹಿಸುವುದರೊಂದಿಗೆ ಅಲ್ಲಾಹನನ್ನು ಭಯಪಡುತ್ತಾ ಮರಣದ ನೆನಪಿನೊಂದಿಗೆ ಜೀವಿಸಿರಿ ನಿಮ್ಮ ಸಂಕಷ್ಟಗಳು ತನ್ನಿಂತಾನೇ ದೂರವಾಗುತ್ತದೆ ಪವಿತ್ರ ರಂಝಾನ್ ತಿಂಗಳನ್ನು ಆರಾಧನಾ ಕಾರ್ಯಗಳಿಗೆ ಹೆಚ್ಚೆಚ್ಚು ಬಳಿಸಿಕೊಂಡು ವಿಜಯೀಯಾಗಿರಿ ಎಂದು ಬಹು| ಫಾರೂಕ್ ಹನೀಫಿ ಪರ್ಲೊಟ್ಟು ಹೇಳಿದರು,ಅವರು ಕರ್ನಾಟಕ ಮುಸ್ಲಿಂ ಜಮಾ‌ಅತ್, ಎಸ್‌ವೈ‌ಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ನಡೆದ ರಂಝಾನ್ ಸಿದ್ದತಾ ತರಗತಿಯಲ್ಲಿ ಮಾತಾಡಿದರು,ಹೈದರ್ ಸಖಾಫಿ ಶೇರಾ ಮತ್ತು ಅಶ್ರಫ್ ಸಖಾಫಿ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಸಿಕೊಟ್ಟರು, ಎಸ್‌ವೈ‌ಎಸ್ ಮಾಣಿ ಸರ್ಕಲ್ ಅಧ್ಯಕ್ಷ ರಫೀಕ್ ಮದನಿ ಪಾಟ್ರಕೋಡಿ ದುಆ ಮಾಡಿದರು,ಕಾರ್ಯಕ್ರಮದಲ್ಲಿ ಹಾಫಿಳ್ ಅನಸ್,ಫಾರೂಕ್ ಶೂ ಪ್ಯಾಲೇಸ್, ಯೂಸುಫ್ ಹಾಜಿ,ಅಬ್ದುಲ್ ಕರೀಂ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಮಾಣಿ, ಹಂಝ ಸೂರಿಕುಮೇರು, ಉಮ್ಮರ್ ಚಿಕನ್, ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.

m

Related Posts