Featured, ಅಂಕಣ, ರಾಜ್ಯ

ಗುತ್ತಿಗೆ ಕಾಮಗಾರಿಗಳಲ್ಲಿ 40%+ ಕಮಿಷನ್ ಅವ್ಯವಹಾರ ಪ್ರಕರಣ: ಸಿಎಂಗೆ ತನಿಖಾ ವರದಿ ಸಲ್ಲಿಸಿದ ನ್ಯಾ.ನಾಗಮೋಹನದಾಸ್ ಆಯೋಗ;

ಬೆಂಗಳೂರು: ನ್ಯಾ. ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯ ವಿಚಾರಣಾ ಆಯೋಗವು ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದೆ ಎನ್ನಲಾಗುತ್ತಿದ್ದ ಅವ್ಯವಹಾರ ಮತ್ತು ನಾರಾಯಣಪುರ ಅಣೆಕಟ್ಟು ಆಧುನೀಕರಣ ಯೋಜನೆಯ ಅಂದಾಜು ಪಟ್ಟಿಯ ಅಕ್ರಮಗಳ ಕುರಿತಾದ ಎರಡು ಪ್ರತ್ಯೇಕ ತನಿಖಾ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬುಧವಾರ ಸಲ್ಲಿಸಿದೆ.

ಸುಳ್ಯದಲ್ಲಿ “ಗಾಂಜಾ” “MDMA” ವೈರಲ್ ಬರಹ;!!!!

ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರಿ ಟೆಂಡರ್ ಕಾಮಗಾರಿಗಳಲ್ಲಿ **40% ಕಮಿಷನ್** ವಸೂಲಿ ನಡೆಸಲಾಗುತ್ತಿದೆ ಎಂದು ದೂರಿದ್ದು, ಈ ಆರೋಪಗಳ ಸತ್ಯಾಸತ್ಯತೆ ಮತ್ತು ಹಿನ್ನೆಲೆಗಳನ್ನು ನಾಗಮೋಹನದಾಸ್ ಆಯೋಗವು ತನಿಖೆ ಮಾಡಿ ವಿವರಗಳನ್ನು ವರದಿಯಲ್ಲಿ ದಾಖಲಿಸಿದೆ. ಇದೇ ಸಮಯದಲ್ಲಿ, ರಾಯಚೂರು ಜಿಲ್ಲೆಯ ನಾರಾಯಣಪುರ ಅಣೆಕಟ್ಟು ಆಧುನೀಕರಣ ಯೋಜನೆಯಲ್ಲಿ ಅಂದಾಜು ಪಟ್ಟಿಯನ್ನು ದುರುದ್ದೇಶಪೂರಿತವಾಗಿ ಹೆಚ್ಚಿಸಿ ಹಣದ ದುರುಪಯೋಗ ಮಾಡಿದ ಆರೋಪಗಳ ತನಿಖೆಯನ್ನು ಮೊದಲು ಸಿದ್ದಗಂಗಪ್ಪರ ನೇತೃತ್ವದ ತಾಂತ್ರಿಕ ಸಮಿತಿ ನಡೆಸಿತ್ತು. ಆದರೆ ನಂತರ ಈ ಹೊಣೆಗಾರಿಕೆಯನ್ನು ನಾಗಮೋಹನದಾಸ್ ಆಯೋಗಕ್ಕೆ ವರ್ಗಾಯಿಸಲಾಯಿತು. ಆಯೋಗವು ಸಮಿತಿಯ ವರದಿಯನ್ನು ಪರಿಶೀಲಿಸಿದ ಜೊತೆಗೆ ಸ್ವಂತ ತನಿಖೆ ನಡೆಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ.

ಸರ್ಕಾರವು ಈಗ ಈ ವರದಿಗಳ ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ತನಿಖೆಗಳು ಆರೋಪಿತರ ಪಾತ್ರ, ಅಕ್ರಮಗಳ ವಿವರ ಮತ್ತು ಸುಧಾರಣೆಗಳಿಗಾಗಿ ಶಿಫಾರಸುಗಳನ್ನು ಒಳಗೊಂಡಿವೆ ಎನ್ನಲಾಗಿದೆ.

ಸುಳ್ಯ: ವರ್ಷದ ಮೊದಲ ಮಳೆ ಸಿಂಚನ ಕನಕಮಜಲು ಆನೆಗುಂಡಿ ಬಳಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ : ಸುಳ್ಯ ಕ್ಕೆ ವಿದ್ಯುತ್ ಸರಬರಾಜು ಕಡಿತ

m

Related Posts