Featured, ಇತರೆ, ಸ್ಥಳೀಯ

ವೈದಿಕ ಸೂಲಿಬೆಲೆ,ಮುತಾಲಿಕ್ ಗೆ ಸಮಾಜದಲ್ಲಿ ಹೆಣ್ಣು ನಿರಾಕರಣೆಯೇ ಅವರ ಅಬ್ಬೇಪಾರಿಕೆ ಸಮಸ್ಯೆಗೆ ಕಾರಣ: ಕೆ.ಅಶ್ರಫ್

ಮಂಗಳೂರು: ವೈದಿಕ ಸಮಾಜದಲ್ಲಿ ಅರ್ಹ ವರರಿಗೆ ಅವರ ಶೈಕ್ಷಣಿಕ ಮಟ್ಟ ನೋಡದೆ ವಧು ನೀಡುತ್ತಿದ್ದಲ್ಲಿ ಅವರು ಸಂಸ್ಕಾರವಂತರಾಗಿ, ಕುಟುಂಬದೊಂದಿಗೆ ಸಂಸಾರ ನಡೆಸುತ್ತಿದ್ದರು. ಆದರೆ ಇದೆಲ್ಲವೂ ತಪ್ಪಿದ್ದಾಗ ಆಗುವ ದುರಂತವೇ ಇಂದು ಇಡೀ ಸಮಾಜದ ಸ್ವಾಸ್ಥ್ಯ ನಿಯಂತ್ರಣವನ್ನು ಕಳೆದು ಕೊಳ್ಳುತ್ತಿದೆ.

ಸುಳ್ಯದಲ್ಲಿ “ಗಾಂಜಾ” “MDMA” ವೈರಲ್ ಬರಹ;!!!!

ಮುತಾಲಿಕ್ ಸೂಲಿಬೆಲೆ ರಂತವರಿಗೆ ಇನ್ನು ಹೆಣ್ಣು ನೀಡಲು ಅವರ ಸಮಾಜ ತಯಾರಿಲ್ಲ. ಅದಕ್ಕಾಗಿ ಅವರು ಲವ್ ಜೆಹಾದ್, ಘರ್ ವಾಪಸಿ ಎಂದು ಕನವರಿಸುವುದು ಮಾತ್ರವಲ್ಲ, ಅದರ ಬಗ್ಗೆ ಕೃತಿಯನ್ನೇ ಬರೆದು ಹಂಚುತ್ತಿದ್ದಾರೆ. ಮಾತ್ರವಲ್ಲದೆ ನಾಡಿನ ಸಂಭಂಧವಲ್ಲದ ವಿವಿಧ ವರ್ಗ, ಪಂಗಡ,ಧರ್ಮಗಳ ಮಧ್ಯೆ ಕೋಮು ಕಿಚ್ಚು ಹಚ್ಚಲು ಪ್ರಯತ್ನಿಸಿರುವುದಲ್ಲದೆ, ಸಮಾಜಕ್ಕೆ ಕಂಟಕವಾಗಿದ್ದಾರೆ.

ಸುಳ್ಯ: ವರ್ಷದ ಮೊದಲ ಮಳೆ ಸಿಂಚನ ಕನಕಮಜಲು ಆನೆಗುಂಡಿ ಬಳಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ : ಸುಳ್ಯ ಕ್ಕೆ ವಿದ್ಯುತ್ ಸರಬರಾಜು ಕಡಿತ

ಇವರಿಗೆ ಭಾರತದಲ್ಲಿ ಯಾವ ವರ್ಗವೂ ಹೆಣ್ಣು ನೀಡುವುದಿಲ್ಲ ಎಂದಾದರೆ, ಕೇಂದ್ರ ಸರ್ಕಾರದ ಮಹಿಳಾ ಸಬಲೀಕರಣ ಇಲಾಖೆ ಇವರನ್ನು ಪಕ್ಕದ ನೇಪಾಳಕ್ಕೆ ಗಡೀಪಾರು ಗೊಳಿಸಿ ಅಲ್ಲಿಂದ ಅವರ ಸಮಾಜದ ಹೆಣ್ಣನ್ನು ವಿವಾಹವಾಗಿ ಅಲ್ಲಿಯೇ ನೆಮ್ಮದಿಯಿಂದ ಇರಲು ವ್ಯವಸ್ಥೆ ಗೊಳಿಸಬೇಕು. ಮುತಾಲಿಕ್ ಸೂಲಿಬೆಲೆ ಯಂತವರು ಇಡೀ ರಾಜ್ಯದ ಅಭಿವೃದ್ಧಿಗೆ ಕಂಟಕ ಆಗಿದ್ದು, ದ.ಕ.ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೂ ಮಾರಕ ಆಗಿದ್ದಾರೆ. ಸರಕಾರ ಈ ಬೆಳವಣಿಗೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು, ಕಠಿಣ ಕ್ರಮ ಕೈಗೊಳ್ಳಬೇಕು. ಹೆಣ್ಣು ನಿರಾಕರಣೆಯಿಂದಾಗಿ ಇಂತಹ ಸಮಸ್ಯೆ ಸೃಷ್ಟಿ ಆಗುವುದಾದರೆ, ಆ ಸಮಾಜ ದೊಂದಿಗೆ ಸರಕಾರ ಚಿಂತನೆ ನಡೆಸಿ ಸಮಾಲೋಚನೆ ನಡೆಸಿ ಮುಂದೆ ಬರುವಂತಹ ಅನಾಹುತಗಳನ್ನು ತಡೆಯಬೇಕಿದೆ. ವೈದಿಕ ಸಮಾಜ ಇನ್ನಾದರೂ ಅರಿಯಲಿ.

ಕೆ.ಅಶ್ರಫ್( ಮಾಜಿ ಮೇಯರ್)ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

m

Related Posts