ವಿದ್ಯುತ್ ಮರು ಸರಬರಾಜಿಗೆ ದುರಸ್ತಿ ಕೆಲಸಗಳು ನಡೆಯುತ್ತಿದ್ದು ಇಂದು ಮಧ್ಯಾನ್ಹ ಹೊತ್ತಿಗೆ ಮರು ಸ್ಥಾಪಿತವಾಗಬಹುದು ನಿರೀಕ್ಷೆ !!
ಸುಳ್ಯ : ಸುಳ್ಯಕ್ಕೆ ವರ್ಷದ ಮೊದಲ ಮಳೆಯ ಸಿಂಚನ! ಮೊದಲ ಮಳೆ ಬಂದಾಗ, ಅದು ಶೀತಲ ಹವೆ, ಮಣ್ಣಿನ ಸುವಾಸನೆ (ಪೆಟ್ರಿಕೋರ್), ಮತ್ತು ಹಸಿರಿನ ಆಶಾದಾಯಕತೆಯ ಉಲ್ಲಾಸದ ಅನುಭವ. ನಿನ್ನೆ(12/03/2025) ಮಧ್ಯಾಹ್ನ ಸುಳ್ಯ ನಗರದಲ್ಲಿ ತುಂತುರು ಮಳೆಯ ಸಿಂಚನ ದೊಂದಿಗೆ ಆಗಮಿಸಿದ ವರುಣ…ಕೆಲವೊಂದು ಸ್ಥಳಗಳಲ್ಲಿ ಬಿರುಸಾಗಿ ಬೀಸಿದೆ… ಸಾಯಂಕಾಲ ತಂಪನ್ನು ವರ್ಷಿಸಿದ ವರುಣ, ರಾತ್ರಿ ಹೊತ್ತು ಮತ್ತೆ ಮಳೆ ಬೀಸಿದೆ… ಮಾತ್ರವಲ್ಲ ಕನಕಮಜಲು ಆನೆಗುಂಡಿ ಬಳಿ ಮರವೊಂದು ಧರೆಗೆ ಉರುಳುವ ಸಂದರ್ಭದಲ್ಲಿ ವಿದ್ಯುತ್ ಕಂಬದ ಮೇಲೆ ಬಿದ್ದು ಮೂರು ವಿದ್ಯುತ್ ಕಂಬ ಗಳು ಹಾನಿಯಾಗಿದ್ದು ಸುಳ್ಯಕ್ಕೆ ವಿದ್ಯುತ್ ಸರಬರಾಜು ಕಡಿತ ಗೊಂಡಿದೆ. ತಡರಾತ್ರಿಯಿಂದಲೇ ವಿದ್ಯುತ್ ಮರು ಸರಬರಾಜಿಗೆ ದುರಸ್ತಿ ಕೆಲಸಗಳು ನಡೆಯುತ್ತಿದ್ದು, ಇಂದು ಮಧ್ಯಾಹ್ನ ಹೊತ್ತಿಗೆ ಸ್ಥಾಪಿತವಾಗಬಹುದು ಎಂದು ಮೆಸ್ಕಾಂ ಸುಳ್ಯ ತಿಳಿಸಿದೆ.
ಸುಳ್ಯದಲ್ಲಿ “ಗಾಂಜಾ” “MDMA” ವೈರಲ್ ಬರಹ;!!!!





m







m

