ಪುತ್ತೂರು; ಚುನಾವಣೆಯಲ್ಲಿ ಗೆದ್ದು ಶಾಸಕರಾದವರ ಹೆಸರು ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಚಿರಪರಿಚಿತವಾಗುವುದು ಸಹಜ. ಆದರೆ ಮೊದಲ ಬಾರಿಗೆ ಶಾಸಕರಾಗಿ ರಾಜ್ಯಮಟ್ಟದಲ್ಲಿ ಹೆಸರು ಮಾಡುವುದು ಕೆಲವೇ ಕೆಲವರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತನ್ನ ವಿಭಿನ್ನ ಯೋಚನೆಗಳಿಂದ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಖ್ಯಾತಿ ಪುತ್ತೂರಿನ ಅಶೋಕ್ ರೈ ಅವರದ್ದಾಗಿದೆ. ಇದೀಗ ೫ ನೇ ತರಗತಿಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ಅಶೋಕ್ ರೈ ಅವರ ಹೆಸರು ಕಾಣಿಸಿಕೊಂಡಿದೆ.
ಸಾಂದೀಪನಿ ಶಾಲೆಯ5 ನೇ ತರಗತಿಯ ಇಂಗ್ಲೀಷ್ ಭಾಷಾ ಪರೀಕ್ಷೆಯಲ್ಲಿ ಬಿಟ್ಟ ಪದಗಳನ್ನು ತುಂಬಿಸುವ ಪ್ರಶ್ನೆಯಲ್ಲಿ ಅಶೋಕ್ ರೈ ಈಸ್—– ಎಂಎಲ್‌ಎ ಆಫ್ ಪುತ್ತೂರು’ ಎಂದು ನೀಡಲಾಗಿದೆ.





m
