ಇತರೆ, ಸ್ಥಳೀಯ

ಕುಂತೂರು : ಝಿಂದಗಿ ಫ್ರೇಂಡ್ಸ್ ಕ್ಲಬ್ ವತಿಯಿಂದ ಬೃಹತ್ ಇಫ್ತಾರ್ ಮೀಟ್

500 ಕ್ಕೂ ಮಿಕ್ಕಿ ವೃತದಾರಿಗಳಿಗೆ ಇಫ್ತಾರ್ ಕೂಟ

ಕುಂತೂರು : ಕುಂತೂರಿನ ಝಿಂದಗಿ ಫ್ರೇಂಡ್ಸ್ ಕ್ಲಬ್ ವತಿಯಿಂದ ಪವಿತ್ರ ರಂಝಾನ್ ತಿಂಗಳ ವೃತದಾರಿಗಳಿಗೆ ಬೃಹತ್ ಇಫ್ತಾರ್ ಕೂಟವನ್ನು ಕುಂತೂರಿನ ಎ & ಬಿ ಜುಮಾ ಮಸೀದಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಸುಮಾರು 500 ಕ್ಕೂ ಮಿಕ್ಕಿ ರಂಝಾನ್ ತಿಂಗಳ ಉಪವಾಸಿಗರು ಪಾಲ್ಗೊಂಡು ಝಿಂದಗಿ ಫ್ರೇಂಡ್ಸ್ ಆಯೋಜಿಸಿದ ಇಫ್ತಾರ್ ಆಹ್ವಾನ ವನ್ನು ಸ್ವೀಕರಿಸಿದರು. ಈಜಿಪ್ತಿಯನ್ ಮಾದರಿಯಲ್ಲಿ ಮಸೀದಿ ಮತ್ತು ಇಫ್ತಾರ್ ನಡೆಯುವ ವಠಾರವನ್ನು ವರ್ಣರಂಜಿತ ಬೆಳಕಿನೊಂದಿಗೆ ಸಜ್ಜು ಗೊಳಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು.

ಇದೇ ಸಂದರ್ಭದಲ್ಲಿ ಅರ್ಹ ರಿಗೆ ಈದ್ ಗಿಫ್ಟ್ ವಿತರಿಸಲಾಯಿತು. ಝಿಂದಗಿ ಫ್ರೇಂಡ್ಸ್ ಕ್ಲಬ್ ಆಯೋಜಿಸಿದ ಸಮುದಾಯ ಸೇವೆಯ ಬಗ್ಗೆ ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತವಾಯಿತು

m

Related Posts