Featured, ಇತರೆ, ಸ್ಥಳೀಯ

ಸುಳ್ಯ : ರಂಝಾನ್ ಹಬ್ಬದ ಅನುಗುಣವಾಗಿ : ಸುಳ್ಯ ಪೋಲೀಸ್ ವೃತ್ತ ವ್ಯಾಪ್ತಿಯ ಪೇಟೆ ಗಳಲ್ಲಿ ವ್ಯಾಪಾರಕ್ಕಾಗಿ ಅಗತ್ಯ ವಸ್ತು ಮಳಿಗೆಗಳಿಗೆ ರಾತ್ರಿ ಹೊತ್ತು ಸಮಯ ವಿಸ್ತರಿಸಿ ಕೊಡಲು ಮನವಿ

ಸುಳ್ಯ ಪೋಲಿಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದ ಮುಸ್ಲಿಂ ಯೂತ್ ಫೆಡರೇಷನ್ ಸುಳ್ಯ ತಾಲೂಕು ಸಮಿತಿ

ಸುಳ್ಯ : ಮುಸ್ಲಿಂ ಭಾಂದವರು ರಂಝಾನ್ ಹಬ್ಬವನ್ನು ಬಹಳ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಿದ್ದು ತಿಂಗಳ ಕೊನೆಯಲ್ಲಿ ಹಬ್ಬ ಆಚರಣೆಯ ಅನುಗುಣವಾಗಿ ಸುಳ್ಯ ಪೊಲೀಸು ವೃತ್ತ ವ್ಯಾಪ್ತಿಯ ಸುಳ್ಯ,ಬೆಳ್ಳಾರೆ, ಕಲ್ಲುಗುಂಡಿ ಪೇಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ವ್ಯಾಪಾರ ವಹಿವಾಟು ಮಳಿಗೆಗಳಿಗೆ ರಾತ್ರಿ ಹೊತ್ತು ಹೆಚ್ಚಿನ ಸಮಯಾವಕಾಶ ನೀಡಿ ಸಮಯ ವಿಸ್ತರಿಸಿ ಅವಕಾಶ ನೀಡಬೇಕೆಂದು ಮುಸ್ಲಿಂ ಯೂತ್ ಫೆಡರೇಷನ್ ಸುಳ್ಯ ತಾಲೂಕು ಸಮಿತಿಯ ಸದಸ್ಯರು ಇಂದು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು


ಇದೀಗ ರಂಝಾನ್ ಹಬ್ಬ ಸಮೀಪಿಸಿದ್ದು ಹಬ್ಬದ ಆಚರಣೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಹಗಲು ಹೊತ್ತು ಸುಳ್ಯ ದಲ್ಲಿ ಗರಿಷ್ಠ ಬಿಸಿಲಿನ ತಾಪಮಾನ ಇರುವುದರಿಂದ ಮಾತ್ರವಲ್ಲ ಮುಸ್ಲಿಂ ಪುರುಷರು, ಮಹಿಳೆಯರು, ಮತ್ತು ಮಕ್ಕಳು ವ್ರತ ಆಚರಿಸಿ ಬಂದು ಅಗತ್ಯ ವಸ್ತುಗಳ ಖರೀದಿ ಅಸಾಧ್ಯ ವಾಗುತ್ತಿದೆ. ಈ ಮೊದಲಿನ ವರ್ಷಗಳಲ್ಲಿ ನಾಲ್ಕು ದಿವಸಗಳ ಕಾಲ ರಾತ್ರಿ ಹೊತ್ತು ವ್ಯಾಪಾರ ವಹಿವಾಟು ಮಾಡುತ್ತಾ ಬಂದಿದ್ದು ಇಂದಿನಿಂದ ಇನ್ನುಳಿದ ಒಂಬತ್ತು ದಿನಗಳವರೆಗೆ ಅಗತ್ಯ ವಸ್ತುಗಳ ಖರೀದಿ ವ್ಯಾಪಾರ ವಹಿವಾಟು ಮಳಿಗೆಗಳಿಗೆ ವ್ಯಾಪಾರಕ್ಕಾಗಿ ರಾತ್ರಿ ಹೊತ್ತು ಹೆಚ್ಚಿನ ಸಮಯಾವಕಾಶ ನೀಡಿ ಸಮಯ ವಿಸ್ತರಿಸಿ ಅವಕಾಶ ನೀಡಬೇಕೆಂದು ಮುಸ್ಲಿಂ ಯೂತ್ ಫೆಡರೇಷನ್ ಸುಳ್ಯ ತಾಲೂಕು ಸಮಿತಿ ತನ್ನ ಮನವಿಯಲ್ಲಿ ಹೇಳಿಕೊಂಡು ಆಗ್ರಹಿಸಿದೆ
ಈ ಸಂದರ್ಭದಲ್ಲಿ ಸುಳ್ಯ ಸುಡ ಅಧ್ಯಕ್ಷರಾದ ಕೆ ಎಂ ಮುಸ್ತಫಾ, ಮುಸ್ಲಿಂ ಯೂತ್ ಫೆಡರೇಷನ್ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾದ ಕೆ ಎಸ್ ಉಮ್ಮರ್, ಮುಸ್ಲಿಂ ಯೂತ್ ಫೆಡರೇಶನ್ ತಾಲೂಕು  ಸಮಿತಿ ನಿರ್ದೇಶಕರಾದ ಶರೀಫ್ ಕಂಠಿ, ಸಿದ್ದೀಕ್ಕ್ ಕ್ಕೂಕ್ಕೂ , ಉನೈಸ್ ಪೆರಾಜೆ, ಇಕ್ಬಾಲ್ ಸುಣ್ಣಮೂಲೆ,ರಶೀದ್ ಜಟ್ಟಿಪಳ್ಳ ಉಪಸ್ಥಿತರಿದ್ದರು ಮನವಿ ಸ್ವೀಕರಿಸಿದ ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ಸಹಕಾರದ ವಿಶ್ವಾಸ ವ್ಯಕ್ತಪಡಿಸಿದರು

m

Related Posts