ಮಂಗಳೂರು: ಕೇಂದ್ರ ಸರ್ಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಸಂವಿಧಾನಿಕವಾಗಿ ಸಮುದಾಯವನ್ನು ಒಗ್ಗೂಡಿಸಿ ಹೋರಾಡಲು ಕರ್ನಾಟಕ ಉಲಮಾ ಕೋ ಆರ್ಡಿನೇಶನ್ ವತಿಯಿಂದ ಏಪ್ರಿಲ್ 18, ಶುಕ್ರವಾರ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವಂತೆ ಸುಳ್ಯ ಸುನ್ನೀ ಸಂಯುಕ್ತ ಜಮಾಅತ್ ಕರೆ ನೀಡಿದೆ.
ಭಾರತೀಯ ಮುಸಲ್ಮಾನರ ಕೋಟ್ಯಾಂತರ ವಕ್ಫ್ ಆಸ್ತಿಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರಕಾರ ಅದನ್ನು ಕಬಳಿಸುವ ಹುನ್ನಾರವನ್ನು ಹೊಂದಿದೆ. ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರತಿಯೊಬ್ಬ ಭಾರತೀಯನು ತಿರಸ್ಕರಿಸಬೇಕಾಗಿದೆ. ಈ ಕುರಿತು ಕರ್ನಾಟಕ ಉಲಮಾ ಕೋ ಆರ್ಡಿನೇಶನ್ ಕರೆ ನೀಡಿರುವ ಬೃಹತ್ ಪ್ರತಿಭಟನೆಯನ್ನು ಸುಳ್ಯ ಸುನ್ನೀ ಸಂಯುಕ್ತ ಜಮಾಅತ್ ವ್ಯಾಪ್ತಿಯ ಪ್ರತಿಯೊಂದು ಜಮಾಅತ್ ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಹಾಗೂ ಈ ವಿಷಯದಲ್ಲಿ ಜಮಾಅತ್ ಕಮಿಟಿ ಮುತುವರ್ಜಿ ವಹಿಸಿ ಬಸ್ ವ್ಯವಸ್ಥೆಗೊಳಿಸಿ ಗರಿಷ್ಠ ಮಟ್ಟದಲ್ಲಿ ಜಮಾತರನ್ನು ಭಾಗವಹಿಸುವಂತೆ ಮಾಡಬೇಕಾಗಿ ಸುಳ್ಯ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.





m
