ಮಹಿಳೆಯರು ಸ್ವ ಉದ್ಯೋಗದಿಂದ ಪ್ರಗತಿ ಗೊಂಡರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ:- ಸಹನಾ ಕಾಂತಬೈಲು
ಕೊಯನಾಡು:- ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ರತ್ನಶ್ರೀ ಜ್ಞಾನ ವಿಕಾಸ ಕೇಂದ್ರ ಕೊಯನಾಡು ಸಹಭಾಗಿತ್ವದಲ್ಲಿ ಮಹಿಳಾ ಸಬಲೀಕರಣ ಮತ್ತು ನೀರಿನ ಸಂರಕ್ಷಣೆ ಕಾರ್ಯಕ್ರಮವೂ ಏಪ್ರಿಲ್ 23 ಬುಧವಾರ ದಂದು ಶ್ರೀ ಗಣೇಶ್ ಕಲಾ ಮಂದಿರದಲ್ಲಿ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಶ್ರೀ ಒಕ್ಕೂಟದ ಅಧ್ಯಕ್ಷ ಶ್ರೀಮತಿ ಮೀನಾಕುಮಾರಿ ವಹಿಸಿದರು, ರತ್ನಶ್ರೀ ಜ್ಞಾನ ವಿಕಾಸ ಯೋಜನಾಧಿಕಾರಿ ಶ್ರೀ ಪುರುಷೋತ್ತಮ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ ಕೃಷಿಕ, ಬರಹಗಾರ್ತಿ ಆದಂತಹ ಶ್ರೀಮತಿ ಸಹನಾ ಕಾಂತಬೈಲು ರವರು ಮಾತನಾಡಿ ಮಹಿಳೆಯರು ಸ್ವ ಉದ್ಯೋಗದಿಂದ ಪ್ರಗತಿ ಗೊಂಡರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ,ಮನೆಯಲ್ಲಿಯೇ ಕೋಳಿ ಸಾಕಾಣಿಕೆ, ಹಪ್ಪಳ ಸಂಡಿಗೆ ಇತ್ಯಾದಿ ತಯಾರಿಸಿ ಮಾರಾಟ ಮಾಡುವುದರಿಂದ ಮಹಿಳೆಯರು ಆರ್ಥಿಕವಾಗಿ ಮುಂದುವರಿಯಲು ಸಾಧ್ಯ ಎಂದರು, ನೀರಿನ ಮಿತ ಬಳಕೆಯಿಂದಲೂ ಜಲ ಸಂಪತ್ತನ್ನು ಉಳಿಸಲು ಸಾಧ್ಯ ಹಾಗೂ ಮುಂದೊಂದು ದಿನ ಎಲ್ಲಿಯಾದರೂ ಮೂರನೇ ಮಹಾ ಯುದ್ಧ ನಡೆದರೆ ಅದು ಕುಡಿಯುವ ನೀರಿಗಂತೆ ಎನ್ನುವ ಮಾತಿದೆ ಎಂದು ಸಭಿಕರಿಗೆ ಮನಮುಟ್ಟುವಂತೆ ವಿವರಿಸಿ ಇನ್ಯಾವುದೆಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಬಲರಾಗಬಹುದು ಸ್ವತಹ ಮೇಲೆ ಬರಬಹುದು ಎಂಬುದನ್ನು ಕುಲಂಕುಶವಾಗಿ ಪರಾಮರ್ಶಿಸಿ ಮಹಿಳೆಯರಿಗೆ ಮನೋಸ್ಥೈರ್ಯವನ್ನು ತುಂಬಿದರು.
ಜೋಡುಪಾಲ: ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿ: ಗಾಯಾಳುಗಳು ಆಸ್ಪತ್ರೆಗೆ ದಾಖಲು

ಮುಖ್ಯ ಅತಿಥಿಗಳಾಗಿ ಆಗಮಿಸಿದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಮಧುಕರ್ ರವರು ಮಾತನಾಡಿ ಸಮಾಜ ಕಾರ್ಯ ಶಿಕ್ಷಣ ಇದೊಂದು ವೃತ್ತಿ ಬದುಕಿನ ಅವಕಾಶವಾಗಿದೆ,ಸಮಾಜ ಕಾರ್ಯ ಶಿಕ್ಷಣ ಪಡೆದವರು ಸ್ವಯಂ ಸೇವಾ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ಆಪ್ತ ಸಮಾಲೋಚನ ಕೇಂದ್ರಗಳಲ್ಲಿ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ಸಂಯೋಜಕರಾಗಿ ಅಥವಾ ಯೋಜನಾಧಿಕಾರಿಗಳಾಗಿಯೂ ಉದ್ಯೋಗವಕಾಶಕ್ಕೆ ಆದ್ಯತೆ ನೀಡುತ್ತಾರೆ ಮಾನಸಿಕ ತೊಂದರೆಗಳಿಗೆ ಒಳಗಾದವರಿಗೆ ಗ್ರಾಮೀಣ ಜನರಿಗೆ ಕೊಳಚೆ ಪ್ರದೇಶಗಳ ವಾಸಿಗಳಿಗೆ ಸಹಾಯ ಮಾಡಬಲ್ಲ ವಿವಿಧ ಅವಕಾಶಗಳ ನೀಡುವ ಈ ಶಿಕ್ಷಣದ ಮೂಲಕ ಉದ್ಯೋಗ ಪಡೆಯುವವರಿಗೆ ಆರ್ಥಿಕವಾಗಿಯೂ ಒಳ್ಳೆಯ ವೇತನವನ್ನು ದೊರೆಯುತ್ತದೆ ದೇಶವಿದೇಶಗಳಲ್ಲಿಯೂ ಉದ್ಯೋಗಕ್ಕೆ ಅವಕಾಶವಿರುತ್ತದೆ ಎಂದು ಸಮಾಜ ಕಾರ್ಯ ಶಿಕ್ಷಣದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು, ರತ್ನಶ್ರೀ ಜ್ಞಾನ ವಿಕಾಸ ಕೇಂದ್ರ ಕೊಯನಾಡು ಸಂಘದ ಸದಸ್ಯರು ಭಾಗವಹಿಸಿದ್ದರು, ಸಮಾಜ ಕಾರ್ಯ ವಿಧ್ಯಾರ್ಥಿನಿ ಪ್ರಾರ್ಥನೆ ನೆರವೇರಿಸಿದರು, ಸಮಾಜ ಕಾರ್ಯ ವಿಧ್ಯಾರ್ಥಿ ಪ್ರಜಿತ್ ಸರ್ವರನ್ನು ಸ್ವಾಗತಿಸಿದರು, ಸಮಾಜ ಕಾರ್ಯ ವಿಧ್ಯಾರ್ಥಿ ರುನೈಝ್ ಕಾರ್ಯಕ್ರಮ ನಿರೂಪಿಸಿದರು, ರತ್ನಶ್ರೀ ಜ್ಞಾನ ವಿಕಾಸ ಸಂಯೋಜಕಿ ಕುಮಾರಿ ಮಾಲಿನಿ ವಂದಿಸಿದರು, ಕಾರ್ಯಕ್ರಮದಲ್ಲಿ ರತ್ನಶ್ರೀ ಸಂಘದ ತಾಲೂಕು ಹಾಗೂ ವಲಯ ಮುಖ್ಯಸ್ಥರು, ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಶರತ್, ದಿಕ್ಷೀತಾ, ಸಹನಾ, ತುಳಸಿ, ಪೂರ್ವಿಕ ಹಾಗೂ ರತ್ನಶ್ರೀ ಜ್ಞಾನ ವಿಕಾಸ ಕೇಂದ್ರ ಕೊಯನಾಡು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.






m
