Featured, ಅಂಕಣ, ಸ್ಥಳೀಯ

ಮುನವ್ವಿರುಲ್ ಇಸ್ಲಾಂ ಜಮಾಅತ್ ಗಲ್ಫ್ ಕಮಿಟಿ ಪೆರಾಜೆ: ಗಲ್ಫ್ ಮೀಟ್ ಮತ್ತು ಜಮಾಅತ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

 ಎಂಐಜೆಜಿಸಿ ಪೆರಾಜೆ ವತಿಯಿಂದ ಗಲ್ಫ್ ಮೀಟ್ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದಿನಾಂಕ 8.5.25 ನೇ ಬುಧವಾರದಂದು ಕಲ್ಚೆರ್ಪೆಯ ಹಮೀದ್ ಎಂ ಐ ರವರ ನಿವಾಸದಲ್ಲಿ ನಡೆಯಿತು. ಪೆರಾಜೆ ಜಮಾಅತ್ ನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಎಸ್ ಎಸ್ ಎಲ್ ಸಿ , ಪಿ ಯು ಸಿ ಮತ್ತು ಮದರಸ ಹತ್ತನೇ ತರಗತಿ ವಿಭಾಗದಲ್ಲಿ ಡಿಸ್ಟಿಂಕ್ಷನ್ ಮಾರ್ಕ್ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

   ಎಸ್ ಎಸ್ ಎಲ್ ಸಿ ಯಲ್ಲಿ ಶಿದಾ ಎಸ್, ಅನಂ ಎ, ಬಿ ಟಿ ಮರಿಯಮ್ ಅಫ್ರಾ

  ದ್ವಿತೀಯ ಪಿಯುಸಿ ಯಲ್ಲಿ ಆಯಿಷತ್ ಇಫಾ, ಅಫ್ರಾ ಫಾತಿಮ ಎ, ಆಮಿನ ಖುರತ್ ಐನಾ.

  ಮದರಸ ಹತ್ತನೇ ತರಗತಿಯಲ್ಲಿ ಫಾತಿಮತ್ ಶಿದಾ ಹಾಗೂ ಫಾತಿಮತ್ ಇರ್ಷಾನ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಜಮಾಅತ್ ಗೆ ಕೀರ್ತಿಯನ್ನು ತಂದಿರುವುದಕ್ಕೆ ವಿಶೇಷವಾಗಿ ಗಲ್ಫ್ ಕಮಿಟಿಯು ಅಭಿನಂದನೆ ಸಲ್ಲಿಸಲಾಯಿತು.

   ಪೆರಾಜೆ ಖತೀಬ್ ಉಸ್ತಾದ್ ಯೂಸುಫ್ ಕಾಮಿಲ್ ಸಖಾಪಿ ಉಸ್ತಾದ್, ಪೆರಾಜೆ ಮುಅಜ್ಜಿನ್ ಅಶ್ರಫ್ ಅಹ್ಸನಿ ಅನ್ವರಿ ಉಸ್ತಾದ್ ರವರ ದುವಾ ಹಾಗೂ ಆತ್ಮೀಯ ಮಜ್ಲಿಸ್ನೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಹಮೀದ್ ಎಂ ಐ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ರಿಯಾದ್ ಸಅದಿ ಉಸ್ತಾದ್ ರವರು ಕಿರಾತ್ ಪಠಿಸಿದರು.ಹುಝೈಫ ಪೆರಾಜೆ ರವರು ಸಭೆಯನ್ನು ಸ್ವಾಗತಿಸಿದರು. ಅಬ್ದುಲ್ ಸಲಾಂ ಕಡಮಕ್ಕಲ್ ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ವಿದ್ಯಾರ್ಥಿನಿಗಳಿಗೆ ಶುಭ ಹಾರೈಸಿದರು.

ತದನಂತರ ಸಾಧಕರಿಗೆ ಮೊಮೆಂಟೋ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಗಲ್ಫ್ ಕಮಿಟಿ ಕಾರ್ಯದರ್ಶಿ ಝಾಹಿರ್ ಪೆರಾಜೆ ಆನ್ಲೈನ್ ಮೂಲಕ ಸಭಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.ಕೊನೆಯಲ್ಲಿ ದುವಾ, ಸ್ವಲಾತ್ ಉಪಹಾರದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು

ಈ ಒಂದು ಕಾರ್ಯಕ್ರಮದಲ್ಲಿ ಗಲ್ಫ್ ಕಮಿಟಿ ಸದಸ್ಯರಾದ ಜಮಾಲ್, ಅಶ್ರಫ್ ಗುರುಂಪು, ಆರಿಸ್ ಆಚು, ತಾಹಿರ್ ಅಹದ್, ನೂರುದ್ದೀನ್, ವಿದ್ಯಾರ್ಥಿನಿಯರ ಪೋಷಕರು ಹಾಗೂ ಊರಿನ ಹಲವರು ಭಾಗವಹಿಸಿದ್ದರು.

m

Related Posts