ಉಡುಪಿ ಮೇ.14: ಕಳೆದ ಕೆಲವು ವರ್ಷಗಳಿಂದ ಆಶ್ರಮದಲ್ಲಿ ಆಶ್ರಯ ಪಡೆದ ಹಿರಿಯ ಮಹಿಳೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ಮಹಿಳೆಯ ಅಂತ್ಯಕ್ರಿಯೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ನೆರವೇರಿಸಿದರು.
ಮಹಿಳೆ ಶಾಂತಮ್ಮ (87) ಉದ್ಯಾವರದ ಕನಸಿನ ಮನೆ ಆಶ್ರಮದಲ್ಲಿ ಆಶ್ರಯ ಪಡೆದಿದ್ದು, ಹಾಸಿಗೆ ಹಿಡಿದಿದ್ದರು. ಇದೀಗ ಮೃತಪಟ್ಟು ಸಂಬಂಧಿಕರ ಪತ್ತೆ ಈವರೆಗೂ ಆಗಿರಲಿಲ್ಲ.
ಅಂತ್ಯ ಕ್ರಿಯೆಯಲ್ಲಿ ಆಶ್ರಮದ ಸಿಬ್ಬಂದಿ ಹಾಗೂ ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದರು.





m
