Featured, ಇತರೆ, ಸ್ಥಳೀಯ

ಸುಳ್ಯ ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಕಾಮಗಾರಿಗಳಿಗೆ ರೂಪಾಯಿ 50 ಲಕ್ಷ ಅನುದಾನ ಬಿಡುಗಡೆ

*ಸುಳ್ಯ ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಕಾಮಗಾರಿಗಳಿಗೆ ರೂಪಾಯಿ 50 ಲಕ್ಷ ಅನುದಾನ ಬಿಡುಗಡೆ*

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆಯಿಂದ,  ನಿರ್ದೇಶಕರು ಗ್ರಾಮೀಣ ಅಭಿವೃದ್ಧಿ ಹಾಗೂ ಪದನಿಮಿತ್ತ ಸರಕಾರದ ಉಪ ಕಾರ್ಯದರ್ಶಿ ಆರ್ ಆರ್ ಸಿ/2025(ಇ –1690362) ದಿನಾಂಕ 21/02/2025 ಇವರ ಉಲ್ಲೇಖ ಪತ್ರದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯಾಲಯ ಇವರ ಪತ್ರದ ಸಂಖ್ಯೆ ಸಂ: ದಕಜಿಪ/ಯೋ/ಪಿ1/ಸಿಆರ್ 05/2024-25 ರಂತೆ ದಿನಾಂಕ 18/03/2025 ರ ಪತ್ರದ ಪ್ರಕಾರ 2024-25 ನೇ ಸಾಲಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾರ್ಯಕ್ರಮದ ಅಡಿ ಪರಿಶಿಷ್ಟ ಪಂಗಡ ಕಾರ್ಯಕ್ರಮ ಟಿಎಸ್ ಪಿ ಲೆಕ್ಕ ಶೀರ್ಷಿಕೆ 5054-03-337-0-75-423 ರಸ್ತೆ ಕಾಮಗಾರಿ ಯೋಜನೆ ಅಡಿ  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು – ಮಾಣಿಮರ್ದು ಪರಿಶಿಷ್ಟ ಪಂಗಡ ರಸ್ತೆ ಅಭಿವೃದ್ಧಿಗೆ ರೂಪಾಯಿ 10 ಲಕ್ಷ, ಆಲೆಟ್ಟಿ ಗ್ರಾಮದ  ಪರಿವಾರಕಾನ  ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 6 ಲಕ್ಷ, ನೆಲ್ಲೂರು ಕೆಮ್ರಾಜ್ಯ ಗ್ರಾಮದ ನಾರ್ಣಕಜೆ – ಏರ್ಮೆಟ್ಟಿ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 7 ಲಕ್ಷ,  ಮಂಡೆಕೋಲು ಗ್ರಾಮದ ಕುಂಡಪಾರೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 5.50 ಲಕ್ಷ, ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 6 ಲಕ್ಷ, ಮಡಪ್ಪಾಡಿ ಗ್ರಾಮದ ಕಡ್ಯ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 5.50 ಲಕ್ಷ, ಕಲ್ಮಡ್ಕ ಗ್ರಾಮದ ಅಜ್ಜಿಗುಡ್ಡೆ ಅಳಕೆ ಪುಚ್ಚಮ್ಮ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 10 ಲಕ್ಷ ದಂತೆ ಒಟ್ಟು ರೂಪಾಯಿ 50 ಲಕ್ಷ ಅನುದಾನ ಬಿಡುಗಡೆ ಗೊಂಡಿರುತ್ತದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಪ್ರಧಾನ ಕಾರ್ಯದರ್ಶಿ ಪಿ ಯಸ್ ಗಂಗಾಧರ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

m

Related Posts