Featured, ಅಂಕಣ, ಸ್ಥಳೀಯ

ಎ.ಎಸ್.ಪುತ್ತಿಗೆ, ಮುನೀರ್ ವಿರುದ್ಧ ಪ್ರಕರಣ: ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ: ವೈದ್ಯಕೀಯ ರಂಗದ ಹತಾಶತೆ: ಕೆ.ಅಶ್ರಫ್.

ಮಂಗಳೂರು: ಪುತ್ತೂರು ಸರ್ಕಾರಿ ಕಾಲೇಜು ಮತ್ತು ರೋಗಿಯೊಬ್ಬರ ಮಧ್ಯೆ ಸಂಭವಿಸಿ ಮುಕ್ತಾಯವಾಗಲಿದ್ದ ಕಿರು ಘಟನೆಯೊಂದಕ್ಕೆ ಪುತ್ತೂರಿನ ಸಂಘಿ ಅರುಣ್ ಕುಮಾರ್ ಪುತ್ತಿಲ ಮತ್ತು ಕೆಲವು ವೈದ್ಯರು ನಡೆಸಿದ ಮುಷ್ಕರ ರೀತಿಯ ಕೇಸರೀಕರಣವನ್ನು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಆಕ್ಷೇಪ ಹೇಳಿಕೆಯನ್ನು ವೈದ್ಯಕೀಯ ಸೇವೆಗೆ ಭಂಗ ಎಂದು ನೀಡಿದ ಸುಳ್ಳು ದೂರು ಅನ್ನು ಪೊಲೀಸರು ತಿರಸ್ಕರಿಸಿದ ಹೊರತಾಗಿಯೂ ಕೂಡ ಪುತ್ತೂರಿನ ವೈದ್ಯಕೀಯ ತಂಡ ದೂರನ್ನು ಮುನೀರ್ ಕಾಟಿಪಳ್ಳ ಮತ್ತು ವರದಿ ಪ್ರಕಟಿಸಿದ ಪತ್ರಕರ್ತ ಅಬ್ದುಲ್ ಸಲಾಂ ಪುತ್ತಿಗೆ ವಿರುದ್ಧ ಮುಂದುವರಿಸಿರುವುದು ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ.

ಸಮಾಜದಲ್ಲಿನ ಜನ ಸೇವಾ ವರ್ಗದ ಉಳುಕು, ವ್ಯತ್ಯಯ ಗಳನ್ನು ವಿಮರ್ಶಿಸಿ ಹೇಳಿಕೆ ನೀಡುವುದು ಈ ದೇಶದ ಸಂವಿಧಾನ ಜನರಿಗೆ ನೀಡಿದ ವಿಮರ್ಶಾ ಸ್ವಾತಂತ್ರ್ಯ ಆಗಿದೆ. ಸರಕಾರಿ ಆಸ್ಪತ್ರೆಯ ವೈದ್ಯರು ಸರಕಾರದ ಒಂದು ಭಾಗ ಆಗಿದ್ದಾರೆ ,ರೋಗಿಯ ಸೇವಾ ಮತ್ತು ಶುಶ್ರೂಷೆ ಮಧ್ಯೆ ಆದ ವಾದ ವಿವಾದ ಏನೇ ಇದ್ದರೂ ಅದು ರೋಗಿಯ ಮನಸ್ಥಿತಿ ಮತ್ತು ಅವರ ಕುಟುಂಬದ ಆತಂಕದ ಮಾತು ಗೊಂದಲದ ಉಚ್ಚಾರಣೆ ಕ್ಲಿನಿಕಲ್ ತಪಾಸಣೆಯ ಒಳಗೆ ಬರುತ್ತದೆ. ಎಂಬ ಸಾಮಾನ್ಯ ಜ್ಞಾನದ ಹೊರತಾಗಿ ಘಟನೆಯನ್ನು ಬೀದಿಗೆ ತಂದು, ಸಂಘೀ ಪುಢಾರಿ,ಮತ್ತು ಕೇಸರೀಕೃತ ವೈದ್ಯರ ತಂಡ ಅದನ್ನು ಬೀದಿಗೆ ತಂದು ಮುಷ್ಕರ ಹೂಡಿ ಕೋಮು ವಿಧ್ವೇಷಕ್ಕೇ ತಲುಪಿಸುವುದನ್ನು ಈ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮತ್ತು ಸಾರ್ವಜನಿಕ ಹಿತಾಸಕ್ತಿ ಹೇಳಿಕೆಯನ್ನು ಪ್ರಕಟಿಸಿದ ಮಾಧ್ಯಮದ ಅಬ್ದುಲ್ ಸಲಾಮ್ ಪುತ್ತಿಗೆಯ ವಿರುದ್ಧ ಪ್ರಕರಣ ದಾಖಲಿಸಲು ಪ್ರಯತ್ನಿಸಿರುವುದು ಹೋರಾಟಗಾರರ ಮತ್ತು ವಸ್ತು ನಿಷ್ಠ ಮಾಧ್ಯಮ ವರದಿಯನ್ನು ತಡೆಯುವ ಉದ್ದೇಶವಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ನಡೆಸುವ ಕೆಲವು ಸೀಮಿತ ವೈದ್ಯರ ತಂಡದ ಪ್ರಯತ್ನ ಆಗಿದೆ. ವೈದ್ಯರ ತಂಡ ತಕ್ಷಣ ತಮ್ಮ ನಿಲುವನ್ನು ಬದಲಿಸಿ ಪ್ರಕಟಣವನ್ನು ಹಿಂಪಡೆಯಬೇಕಿದೆ. ಜವಾಬ್ದಾರಿ ವೃತ್ತಿಪರರ ಮಧ್ಯೆ ಇಂತಹ ಬೆಳವಣಿಗೆ ಅಂತಿಮವಾಗಿ ಸಾರ್ವಜನಿಕ ಸ್ವಾಸ್ತವನ್ನು ನಷ್ಟ ಗೊಳಿಸಲಿದೆ ಎಂಬುದು ಇಲ್ಲಿನ ಆತಂಕ ಆಗಿದೆ.

ಕೆ.ಅಶ್ರಫ್ ( ಮಾಜಿ ಮೇಯರ್)ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

m

Related Posts