Featured, ಅಂಕಣ, ಸ್ಥಳೀಯ

KMJ SYS SSF ಬಾರೆಬೆಟ್ಟು ಯೂನಿಟ್ ವತಿಯಿಂದ ತಾಳಿತ್ತನೂಜಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ :

ಸುನ್ನಿ ಸಂಘಟನೆಗಳಾದ KMJ SYS SSF ಬಾರೆಬೆಟ್ಟು ಯುನಿಟ್ ವತಿಯಿಂದ ದ.ಕ.ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ ಎಲ್ಲಾ ವಿಧ್ಯಾರ್ಥಿಗಳಿಗೆ ಇಂದು (06/06/25 )ನೋಟ್ ಬುಕ್ ವಿತರಣೆ ಮಾಡಲಾಯಿತು .

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ SYS ಇಸಾಬ ಸಾಂತ್ವನ ವಿಭಾಗದ ಉಪಾದ್ಯಕ್ಷರು ಖಲೀಲ್ ಮಾಲಿಕೀ, KMJ ಬಾರೆಬೆಟ್ಟು ಯುನಿಟ್ ಅಧ್ಯಕ್ಷರಾದ ಹಸೈನಾರ್ ಮುಸ್ಲಿಯಾರ್, ರಝಾಕ್ T,ಇಕ್ಬಾಲ್ ಸಿಂಗಾರಿ ನಾರ್ಶ,ಪಂಚಾಯತ್ ಮಾಜಿ ಸದಸ್ಯರಾದ ಗಂಗಾಧರ ಚೌಟ ದೇವಸ್ಯ, ಪಂಚಾಯತ್ ಮಾಜಿ ಸದಸ್ಯಮತ್ತು ಶಾಲಾ ಸ್ತಾಪಕಾದ್ಯಕ್ಷರೂ ಆದ ಯೂಸುಫ್ T,ಅಬ್ದುಲ್ ಲತೀಫ್ ಹನೀಫಿ ಅಧ್ಯಕ್ಷರು SYS ಬೋಳಂತೂರ್ ಸರ್ಕಲ್, KCF ದುಬೈ ನಾಯಕರಾದ ಹಮೀದ್ ಕುಲ್ಯಾರ್,ಬಶೀರ್ ಕುಲ್ಯಾರ್,ಉಮ್ಮರ್ ಇಂಜಿನಿಯರ್ ಸೌದಿಅರೇಬಿಯ,SSF ನಾಯಕರಾದ ರಫೀಕ್ ಮುಹಿನಿ ಅಲ್ ಅಹ್ಸನಿ,ಸಿದ್ದೀಕ್ ಸಅದಿ, ಸಿರಾಜುದ್ದೀನ್ ಅಹ್ಸನಿ,SYS ನಾಯಕರಾದ ಶರೀಫ್ ಸಅದಿ,ಶರೀಫ್ ಕುಲ್ಯಾರ್,ಖಾದರ್ T ,ಸಿದ್ದೀಕ್ ನೀರಪಳಿಕೆ , ಮುಸ್ತಫಾ T , ಶರೀಫ್ P ಮುಂತಾದ ಇನ್ನಿತರ KMJ,SYS,SSF ನ ಕಾರ್ಯಕರ್ತರು ಕೂಡ ಹಾಜರಿದ್ದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಖಾಲಿದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಅಧ್ಯಾ ಪಕರಾದ ಸುಂದರ್ ಸರ್ ಅವರು ಸ್ವಾಗತ ಮಾಡಿದರು ನಂತರ ಶಾಲಾ ಸ್ತಾಪಕಾದ್ಯಕ್ಷರೂ ಸಾಮಾಜಿಕ ಮುಂದಾಳುಗಳಾದ ಯೂಸುಫ್ ಟಿ ಅವರು ಉದ್ಘಾಟನೆ ಮಾಡಿ ಶಾಲೆಯ ಅಭಿವೃದ್ಧಿ ಮತ್ತು ನಾಡಿನಲ್ಲಿ ನಡೆಸುವ ಸುನ್ನಿ ಸಂಘಟನೆಯ ಸೇವೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು,ಮಾಜಿ ಪಂಚಾಯತ್ ಸದಸ್ಯರಾದ ಗಂಗಾಧರ ಚೌಟ ಮಾತನಾಡಿ ಈ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸಲು ಕರೆ ನೀಡಿದರು.SYS ಇಸಾಬ ಸಾಂತ್ವನ ವಿಭಾಗದ ರಾಜ್ಯ ಉಪಾದ್ಯಕ್ಷರಾದ ಖಲೀಲ್ ಮಾಲಿಕೀ ಅವರು ಮಾತನಾಡಿ ವಿಧ್ಯಾರ್ಥಿಗಳ ವಿದ್ಯೆಯ ಮಹತ್ವ ಮತ್ತು ಸುನ್ನೀ ಸಂಘಟನೆಗಳ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾಗಿ ಮಾತನಾಡಿ ಎಲ್ಲರ ಗಮನಸೆಳೆದರು ನಂತರ ಶರೀಫ್ ಸಅದಿ ಬಾರೆಬೆಟ್ಟು ಪ್ರಾಸ್ತಾವಿಕ ಭಾಷಣ ಮಾಡಿದರು, ಇದಾದ ಬಳಿಕ KMJ ನಾಯಕರಾದ ಹಸೈನಾರ್ ಉಸ್ತಾದ್ ಅವರ ನೇತ್ರತ್ವದಲ್ಲಿ ಎಲ್ಲಾ ಮಕ್ಕಳಿಗೆ ಪುಸ್ತಕವನ್ನು ವಿತರಣೆ ಮಾಡಲಾಯಿತು SDMC ಅಧ್ಯಕ್ಷರಾದ ಖಾಲಿದ್ ಅವರು ಅಧ್ಯಕ್ಷಭಾಷಣ ಮಾಡಿದರು ಕೊನೆಯದಾಗಿ ಶಾಲೆಯ ಅಧ್ಯಾಪಕರಾದ ಪ್ರದೀಪ್ ಸರ್ ರವರು ಬಂದು ಸೇರಿದ ಎಲ್ಲರಿಗೂ ಧನ್ಯವಾದ ತಿಳಿಸಿದರು ಇದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೂಳಿಸಲಾಯಿತು.

m

Related Posts