ಯಮನ್ ಸರ್ಕಾರ ಹಾಗೂ ಸಂತ್ರಸ್ತ ಕುಟುಂಬದೊಂದಿಗೆ ಮಾತುಕತೆ;
ಯೆಮನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಮಹಿಳೆ ನಿಮಿಷಪ್ರಿಯಾ ಅವರ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದೀಗ ನಿಮಿಷಪ್ರಿಯಾ ಬಿಡುಗಡೆ ಪ್ರಯತ್ನಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಸುಲ್ತಾನುಲ್ ಉಲಮಾ, ಕಾಂತಪುರಂ, ಎ.ಪಿ. ಅಬೂಬಕ್ರ್ ಮುಸ್ಲಿಯಾರ್ ಯೆಮನ್ ಸರ್ಕಾರದೊಂದಿಗೆ ಹಾಗೂ ಮೃತ ವ್ಯಕ್ತಿಯ ಕುಟುಂಬದ ಸದಸ್ಯರೊಂದಿಗೆ ನೇರ ಸಂವಾದ ನಡೆಸಿದ್ದಾರೆ ಎಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.
ಮಾತ್ರವಲ್ಲ, ಆಶಾದಾಯಕ ಬೆಳವಣಿಗೆಗೆ ಸಾಧ್ಯತೆಯ ಪ್ರಯತ್ನಗಳು ಮುಂದುವರಿದಿವೆ, ಎನ್ನಲಾಗಿದೆ






m
