ನೂತನ ಮುಖ್ಯಾಧಿಕಾರಿ ಬಸವರಾಜ್ ಗೆ ಸ್ವಾಗತ
ಕಳೆದ 3 ವರ್ಷ ಗಳಿಂದ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಯಾದ ಎಂ. ಎಚ್. ಸುಧಾಕರ್ ಸುಳ್ಯ ಸ್ಥಳೀಯ ಯೋಜನಾ ಪ್ರದೇಶ ದ ಸದಸ್ಯ ಕಾರ್ಯದರ್ಶಿ ಯಾಗಿ,ಇತೀಚೆಗೆ ಸುಳ್ಯಕ್ಕೆ ಪ್ರತ್ಯೇಕ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಕ್ಕೆ ಮುಖ್ಯಾಧಿಕಾರಿ ನೆಲೆಯಲ್ಲಿ ಪ್ರಾಧಿಕಾರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು
ಸುಳ್ಯ ಪಟ್ಟಣ ಪಂಚಾಯತ್ ಸಭಾoಗಣ ದಲ್ಲಿ ಪೌರ ಸೇವಾ ನೌಕರರ ಸಂಘ ದ ವತಿಯಿಂದ ಏರ್ಪಡಿಸಲಾಗಿದ್ದ ನಿರ್ಗಮನ ಮುಖ್ಯಾಧಿಕಾರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ವತಿಯಿಂದ ಅಧ್ಯಕ್ಷ ಕೆ. ಎಂ. ಮುಸ್ತಫ ಗೌರವ ಸಮ್ಮಾನ ನಡೆಸಿದರು
ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ವಹಿಸಿದ್ದರು
ಇದೇ ಸಂದರ್ಭದಲ್ಲಿ ಚಾಮರಾಜಪೇಟೆ ಯಿಂದ ವರ್ಗಾವಣೆ ಗೊಂಡು ಆಗಮಿಸಿದ ನೂತನ ಮುಖ್ಯಾಧಿಕಾರಿ ಬಸವರಾಜ್ ರವರನ್ನು ಸ್ವಾಗತಿಸಲಾಯಿತು
ವೇದಿಕೆಯಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಹಿರಿಯ ಸದಸ್ಯ ಕೆ. ಎಸ್. ಉಮ್ಮರ್ ಉಪಸ್ಥಿತರಿದ್ದರು.





m
