ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆ ಪ್ರದೇಶದಲ್ಲಿ 18/07/2025 ರಂದು ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿದರು. ತ್ಯಾಜ್ಯದಿಂದ ತುಂಬಿದ್ದ ಬ್ಯಾಗ್ ಪರಿಶೀಲನೆಯಿಂದ ಹಳೆಗೇಟು ನಿವಾಸಿಗಳನ್ನು ಗುರುತಿಸಿ, ಅವರ ಮೇಲೆ ರೂ. 5000 ದಂಡ ವಿಧಿಸಲಾಯಿತು.
ಈ ಕ್ರಮದ ಮೂಲಕ ಗ್ರಾಮ ಪಂಚಾಯತ್ ತ್ಯಾಜ್ಯ ನಿರ್ವಹಣೆಯ ಗಂಭೀರತೆಯನ್ನು ತೋರಿಸಿದ್ದು, ಭವಿಷ್ಯದಲ್ಲಿ ಇಂತಹ ಕ್ರಿಯೆಗಳನ್ನು ತಡೆಯುವ ಉದ್ದೇಶದಿಂದ ಸಾರ್ವಜನಿಕರಿಗೆ ಶಿಷ್ಟತೆಯ ಸಂದೇಶ ನೀಡಿದೆ. ಪಂಚಾಯತ್ ಜನರಲ್ಲಿ ಪರಿಸರ ಸ್ವಚತೆಯ ಅರಿವು ಮೂಡಿಸಲು ಕಠಿಣ ಕ್ರಮಗಳನ್ನು ಕೈಗೆತ್ತಿಕೊಂಡಿದೆ.






m

