ಅಧ್ಯಕ್ಷರಾಗಿ ಹಮೀದ್ ಮಾವಂಜಿ, ಕಾರ್ಯದರ್ಶಿ ಆಗಿ ಇಬ್ರಾಹಿಮ್ ಹಾಜಿ ಕತರ್, ಅಯ್ಕೆ

ಸುಳ್ಯ : ಮಂಡೆಕೋಲು
ಸುಳ್ಯ: ಮಂಡೆಕೋಲು ಮೊಹಿದ್ದೀನ್ ಜುಮಾ ಮಸೀದಿಯ ಸರ್ವ ಸದಸ್ಯರ ಸಭೆ ಜುಲೈ 18ರಂದು ಸ್ಥಳೀಯ ಖತೀಬ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಭೆಯಲ್ಲಿ ಮಸೀದಿಯ ಆಡಳಿತ ಮಂಡಳಿಗೆ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಹಮೀದ್ ಮಾವಂಜಿ ಅವರನ್ನು ಸಮಿತಿಯ ಅಧ್ಯಕ್ಷರಾಗಿ ಹಾಜಿ ಇಬ್ರಾಹಿಮ್ ಕತರ್ ಅವರನ್ನು ಪ್ರಧಾನ ಕಾರ್ಯದರ್ಶಿ, ಹಸೈನಾರ್ ಗುರುವ ಮೊಟ್ಟೆಯನ್ನು ಕೋಶಾಧಿಕಾರಿ, ಹಾಗೂ ರಫೀಕ್ ಮಾವಿನಡಿಯನ್ನು ಜತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ನೂತನ ಸಮಿತಿಗೆ ಶುಭಾಶಯ ಕೋರಿದರು





m

