Featured, ಇತರೆ, ಸ್ಥಳೀಯ

ಎಸ್ ವೈ ಎಸ್ ಬೆಳ್ಳಾರೆ ಸರ್ಕಲ್ ವತಿಯಿಂದ C TEAM ಲೀಡರ್ಸ್ ಮೀಟ್ ಯಶಸ್ವಿ ಆಯೋಜನೆ

ಕರ್ನಾಟಕ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಬೆಳ್ಳಾರೆ ಸರ್ಕಲ್ ವತಿಯಿಂದ ದಿನಾಂಕ 3/8/2025 ಆದಿತ್ಯವಾರ ಸಂಜೆ 4.30 ಕ್ಕೆ ಬೆಳ್ಳಾರೆ ಸುನ್ನಿ ಸೆಂಟರಿನಲ್ಲಿ C TEAM ಲೀಡರ್ಸ್ ಮೀಟ್ ಸಮಿತಿ ಅಧ್ಯಕ್ಷರಾದ ಹನೀಫ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘಟನೆಯ ಪ್ರಾಮುಖ್ಯತೆ ಎಂಬ ವಿಷಯದಲ್ಲಿ ಸಂಘಟನಾ ಚತುರರೂ ಪುತ್ತೂರು ಝೋನ್ ಅಧ್ಯಕ್ಷರಾದ ಜಲೀಲ್ ಸಖಾಫಿ ಕರ್ನೂರು ಸಭಿಕರನ್ನು ಪುಲಕಿತಗೊಳಿಸುವಂತಹ ತರಗತಿ ನಡೆಸಿ ಕೊಟ್ಟರು.

ಸುಳ್ಯ ಝೋನ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಜೌಹರಿ ˌಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ˌ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಹಮೀದ್ ಸುಣ್ಣ ಮೂಲೆ ಶುಭ ಕೋರಿದರು. ಶಮೀರ್ ಮೊಗರ್ಪಣೆ ನೌಶಾದ್ ಕರೆಮೂಲೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸರ್ಕಲ್ ವ್ಯಾಪ್ತಿಯ ನಾಲ್ಕು ಶಾಖೆಗಳಿಂದ ಕಾರ್ಯಕರ್ತರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ SSF ಬೆಳ್ಳಾರೆ ಸೆಕ್ಟರ್ ಸಾಹಿತ್ಯೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಟಿ ಎಂ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ಸ್ವಾಗತಿಸಿ ವಂದಿಸಿದರು.

m

Related Posts