ಮಂಗಳೂರು : ಮಂಗಳೂರು ಹಜ್ ನಿರ್ವಹಣಾ ಸಮಿತಿಯ ವತಿಯಿಂದ, ಹಜ್ ಯಾತ್ರೆಗೆ ತೆರಳುವವರಿಗೆ ಕಳೆದ ಏಳುವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸುಳ್ಯದ ಹಿರಿಯ ಸಮಾಜ ಸೇವಕ, ಸುನ್ನಿ ಕಾರ್ಯಕರ್ತ ಅಬ್ದಲ್ ರಹಿಮಾನ್ ಮೊಗರ್ಪಣೆ ಅವರಿಗೆ ಗೌರವ ಸೂಚಿಸಲಾಯಿತು.

ಮಂಗಳೂರಿನ ಯೆನಪೊಯ ಹಾಲ್ ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ, ಹಜ್ ಸಮಿತಿ ಸದಸ್ಯರು, ವಕ್ಫ್ ಬೋರ್ಡ್ ಉಪಾಧ್ಯಕ್ಷರು ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯರಾಗಿರುವ ಅವರ ಸೇವೆಯನ್ನು ಪ್ರಶಂಸಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಹಜ್ ಸಮಿತಿಯ ಹಿರಿಯ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.






m
