ಭಯೋತ್ಪಾದನೆ ಮತ್ತು ಕೋಮುವಾದ ಎಂಬುದು ಇತ್ತೀಚಿನ ಕಾಲದಲ್ಲಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆಗಾಗಿದೆ. ಈ ಎರಡು ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳು ಶಾಂತಿಗೆ ದೊಡ್ಡ ಅಡ್ಡಿಪಡಿಯಾಗಿದೆ.ಭಯೋತ್ಪಾದನೆ ಎಂದರೆ ನಿರ್ದಿಷ್ಟ ಧಾರ್ಮಿಕ, ರಾಜಕೀಯ ಉದ್ದೇಶಗಳಿಗಾಗಿ ಹಿಂಸಾತ್ಮಕ ಮಾರ್ಗವನ್ನು ಅನುಸರಿಸುವುದು.
ಕೋಮುವಾದ ಎಂದರೆ ಒಬ್ಬ ವ್ಯಕ್ತಿಯು ತನ್ನ ಧರ್ಮ ಅಥವಾ ಜಾತಿಯ ನಾಮದಲ್ಲಿ ಇತರ ಧರ್ಮದವರ ವಿರುದ್ಧ ದುಷ್ಪ್ರಚಾರ ಅಥವಾ ಹಿಂಸೆ ಹಮ್ಮಿಕೊಳ್ಳುವುದು. ಇದು ಎರಡೂ ಕೂಡ ಸಾಮಾಜಿಕ ಏಕತೆಗೆ ಧಕ್ಕೆಯಾಗಿದೆ.
ಇದು ಇವತ್ತು ಶಾಲಾ-ಕಾಲೇಜು ಮಕ್ಕಳನ್ನು ಸಹ ತನ್ನ ಬಲಿಪಶುವನ್ನಾಗಿ ಮಾಡುವಲ್ಲಿ ಭಾಗಶಃ ಯಶಸ್ವಿಯಾಗಿದೆ.ಅದಕ್ಕೆ ಸೂಕ್ತ ನಿದರ್ಶನ ಎಂದರೆ ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಎಂಬಲ್ಲಿ ದೇಶ ವಿರೋಧಿ ಕೋಮುವಾದಿಗಳು, ಇವರು ನಡೆಸಿದ ನೀಚ ಕೃತ್ಯಕ್ಕೆ ಇಡೀ ಕರುನಾಡು ಬೆಚ್ಚಿಬಿತ್ತಿದೆ.
ಇಲ್ಲಿನ ಸರ್ಕಾರಿ ಶಾಲೆಯೊಂದರ ನೀರಿನ ಟ್ಯಾಂಕಿಗೆ ವಿದ್ಯಾರ್ಥಿ ಒಬ್ಬನನ್ನು ಬಳಸಿಕೊಂಡು ವಿಷವನ್ನು ಕಿಡಿಗೇಡಿಗಳು ಬೆರೆಸಿದ್ದು, ಇದರಿಂದ ನೀರು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.ಇದನ್ನು ತನಿಖೆ ನಡೆಸಿದ ವೇಳೆ ಬಂದ ಮಾಹಿತಿಯು ಇನ್ನಷ್ಟು ಭೀಕರವಾಗಿತ್ತು . ಪ್ರಸ್ತುತ ಸರಕಾರಿ ಶಾಲೆಯಲ್ಲಿ ಸುಮಾರು ಹದಿಮೂರು ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುಸ್ಲಿಂ ಧರ್ಮಕ್ಕೆ ಸೇರಿದ ಸುಲೈಮಾನ್ ಎಂಬ ಶಿಕ್ಷಕನನ್ನು ಆತನ ಹುದ್ದೆಯಿಂದ ವಜಾ ಮಾಡಿಸಬೇಕೆಂಬ ದುರುದ್ದೇಶದಿಂದ ಈ ಕೃತ್ಯವನ್ನು ಹೆಸರಿಗಿರುವುದಾಗಿ ತನಿಖೆ ವೇಳೆ ಬಯಲಾಗಿದೆ.
ಈಗಾಗಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು ಪ್ರಸ್ತುತ ಅವರು ಶ್ರೀರಾಮ ಸೇನಾ ಸಂಘಟನೆಯ ಮುಖಂಡರಾಗಿದ್ದಾರೆ. ನಾಡಿಗೆ ದ್ರೋಹ ಬಗೆಯುವ ಇಂತಹ ಮಾನವೀಯ ಕೃತ್ಯಗಳಿಗೆ ಸಂಘಟನೆಯು ಬಹಳ ಹಿಂದಿನಿಂದಲೇ ಗುರುತಿಸಿಕೊಂಡಿದ್ದು ಹುಬ್ಬಳ್ಳಿಯ ಬಾಂಬ್ ಪ್ರಕರಣ ಸಿಂಧನೂರಿನ ಪಾಕಿಸ್ತಾನ ಧ್ವಜ ವಿಚಾರ ಗಳ,ಇನ್ನಿತರ ವಿವಾದಗಳ ಹಿನ್ನೆಲೆಯನ್ನು ನಾವು ನೋಡುವುದಾದರೆ ನಮಗೆ ಇದರ ಮೂಲ ಉದ್ದೇಶ ಬಹಳ ಸ್ಪಷ್ಟವಾಗಿ ದೊರೆಯುತ್ತದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೊಂದು ಆಘಾತಕಾರಿ ಘಟನೆ ಮತ್ತು ಕಿಡಿಗೇಡಿಗಳಿ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ.ಧಾರ್ಮಿಕ ಮೂಲಭೂತವಾದ ಕೋಮು ವೈಶಮ್ಯ ಎಂಬುದು ಎಂತಹ ನೀಚ ಕೃತ್ಯವನ್ನು ಮಾಡಿಸಬಲ್ಲದು ಎಂಬುದಕ್ಕೆ ಪುಟ್ಟ ಮಕ್ಕಳ ಮಾರಣಹೋಮಕ್ಕೆ ಕಾರಣವಾಗಬಹುದಾದ ಈ ಘಟನೆ ಸಾಕ್ಷಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸರ್ವ ಜನಾಂಗದ ಶಾಂತಿಯ ತೋಟ …
ರಸಿಕರ ಕಂಗಳ ಸೆಳೆಯುವ ನೋಟ …
ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಖರ ಜೈನರುದ್ಯಾನ….
ಎಂದು ಕುವೆಂಪು ಬರೆದ ನಾಡಗೀತೆ ದಿನನಿತ್ಯ ಶಾಲಾ ಆರಂಭದ ವೇಳೆ ಹೇಳುವ ಯಾವುದೇ ಕೋಮು ವೈಶಮ್ಯಗಳ ಅರಿವೇಯಿರದ ಪುಟಾಣಿ ಮಕ್ಕಳ, ವಿದ್ಯಾರ್ಥಿಗಳ ಮನದಲ್ಲಿ ಕೂಡ ಕೋಮು ಬೀಜವನ್ನು ಬಿತ್ತಿದ್ದಾರೆ .
ಇಂತಹ ಅತ್ಯಂತ ನೀಚ ಮತ್ತು ಕ್ರೂರ ಮನೋಭಾವವನ್ನು ಈ ಸಂಘಟನೆ ಹೊಂದಿದರೂ, ಹಲವಾರು ವರ್ಷಗಳಿಂದ ಈ ಸಂಘಟನೆಯನ್ನು ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದರೂ,ಸಹ ಸರ್ಕಾರ ಮಾತ್ರ ಕಣ್ಣಿದ್ದು ಕೂಡ ಕುರುಡನಂತೆ ವರ್ತಿಸುತ್ತಿದೆ.
ಈಗಾಗಲೇ ಕರಾವಳಿ ಜಿಲ್ಲೆಗಳ ಈ ರೀತಿಯ ಶಾಂತಿಕೆದಡುವ ಸಂಘದವರ ಮೇಲೆ ,ಕೋಮು ಧುವೀಕರಿಸುವಂತಹ ಭಾಷಣ ಮಾಡುವ ಭಾಷಣಕಾರರು ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಿಶೇಷ ತನಿಖಾ ತಂಡ ರಚಿಸಿ ಸರಕಾರ ಆದೇಶಿಸಲಾಗಿದೆ. ಅದನ್ನು ಇಡೀ ರಾಜ್ಯಕ್ಕೆ ವಿಸ್ಕೃತಗೊಳಿಸಬೇಕಾಗಿದೆ .
ದಯವೇ ಧರ್ಮದ ಮೂಲವಯ್ಯ ಎಂಬ ಶರಣರ ನಾಡಿನಲ್ಲಿ ಈ ರೀತಿಯ ನೀಚ ಮತ್ತು ವಿಕೃತ ಕೃತ್ಯದ ವಿರುದ್ಧ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡದೆ ಕ್ರಮ ಕೈಗೊಳ್ಳಬೇಕು. ಇಂತಹ ಮನಸ್ಥಿತಿಯುಳ್ಳ ರಾಜಕೀಯ ನಾಯಕರ, ಮುಖಂಡರ,ಪಕ್ಷದ ಮುಖ್ಯಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಸರ್ಕಾರ ಕ್ರಮ ಕೈಗೊಂಡರೆ ಮಾತ್ರ ಈ ನಾಡಿನ ಭವ್ಯವಾದ ಘನತೆ,ಸಾಮರಸ್ಯ, ಸಂಸ್ಕೃತಿ ಉಳಿಯುತ್ತದೆ ಎಂಬುದನ್ನು ನಾವು ಮನವರಿಕೆ ಮಾಡಬೇಕಾಗಿದೆ.
ಲೇಖಕ-ಆಶಿಕ್ ಕೊಡಗು (ವಿದ್ಯಾರ್ಥಿ, ಶಂಸುಲ್ ಉಲಮಾ ಅರೆಬಿಕ್ ಕಾಲೇಜು , ತೋಡಾರು)






m
