Featured, ಅಂಕಣ, ಸ್ಥಳೀಯ

ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಆಕರ್ಷಕ ತಿರಂಗಾ ರ್‍ಯಾಲಿಯಲ್ಲಿ ಹೆಜ್ಜೆಹಾಕಿದ SDPI ಕಾರ್ಯಕರ್ತರು ಮತ್ತು ನಾಗರಿಕರು

ಬಂಟ್ವಾಳ ಆ 15: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಇಂದು ಬಿ ಸಿ ರೋಡಿನಲ್ಲಿ ಭಯ ಮತ್ತು ಹಸಿವು ಮುಕ್ತ ಸ್ವಾತಂತ್ರ್ಯಕ್ಕಾಗಿ ತಿರಂಗಾ ಯಾತ್ರೆಯು ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಯಶಸ್ವಿಯಾಗಿ ನಡೆಯಿತು.

 

ಮಧ್ಯಾಹ್ನ 3:30 ಕ್ಕೆ ಬಿ ಸಿ ರೋಡಿನ ಮುಖ್ಯ ವೃತ್ತದ ಬಳಿಯಿಂದ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರಿಗೆ ತಿರಂಗಾ ಹಸ್ತಾಂತರಿಸುವ ಮೂಲಕ ಆರಂಭವಾದ ರ್‍ಯಾಲಿಯು ಬಿಡುವಿಲ್ಲದೆ ಸುರಿಯುತ್ತಿದ್ದಂತಹ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಮಕ್ಕಳು, ಮಹಿಳೆಯರು ನಾಗರಿಕರು ಮಳೆಯಲ್ಲಿ ನೆನೆಯುತ್ತಲೇ ಹೆಜ್ಜೆ ಹಾಕಿದರು.

ಕೈಕಂಬದಲ್ಲಿ ಸಾರ್ವಜನಿಕ ಸಭೆ ನಡೆಯುವ ಸ್ಥಳದ ವರೆಗೂ ಬ್ಯಾಂಡ್ ಮೇಳ ದೊಂದಿಗೆ ಸಾಗಿಬಂದ ಆಕರ್ಷಕ ತಿರಂಗಾ ರ್‍ಯಾಲಿಯಲ್ಲಿ ಪುಟಾಣಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಮತ್ತು ಸೈನಿಕರ ವೇಷಭೂಷಣಗಳು ಹಾಗೂ ದಫ್ಫ್ ಮುಟ್ಟು ವಿಶೇಷ ಆಕರ್ಷಣೆಯಾಗಿತ್ತು.

m

Related Posts