Featured, ಅಂಕಣ, ಸ್ಥಳೀಯ

ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್,ಎಸ್ ಎಸ್ ಎಫ್ ಗಾಂಧಿನಗರ ಸುಳ್ಯ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ

ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್,ಎಸ್ ಎಸ್ ಎಫ್ ಗಾಂಧಿನಗರ ಸುಳ್ಯ. 79 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ಸುನ್ನೀ ಸೆಂಟರ್ ಮುಂಬಾಗ ಕಯ್ಯಾರ್ ಕಾಂಪ್ಲೆಕ್ಸ್ ನಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.

ದುವಾ ಮೂಲಕ ಅಬ್ದುಲ್ಲಾ ಸಖಾಫಿ ಪಾರೆ ಚಾಲನೆ ನೀಡಿದರು.ಧ್ವಜಾರೋಹಣ ನಿವೃತ್ತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹಂಝ ಪೊಲೀಸ್ ನಾವೂರು ನೆರವೇರಿಸಿದರು.

ಭಾರತದ ಸೌಂದರ್ಯ ಜ್ಯಾತ್ಯಾತೀತೆ ವಿಷಯ ಪ್ರಸ್ತಾಪಿಸಿ ಡಿವಿಷನ್ ಅಧ್ಯಕ್ಷರಾದ ರಿಹಾನ್ ಸಅದಿ ಬೆಳ್ಳಾರೆ ಶುಭ ಹಾರೈಸಿದರು.

ಆರ್ ಕೆ ಮಹಮ್ಮದ್ ರವರು ಸುನ್ನೀ ಕುಟುಂಬದ ಸದಸ್ಯರು ದೇಶ ಪ್ರೇಮವನ್ನು ಪ್ರತಿ ವರ್ಷ ಒಳ್ಳೆಯ ಉತ್ಸಾಹದಿಂದ ಆಚರಿಸುವುದನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಹಂಝ ಪೊಲೀಸ್ ನಾವೊರು ಸುಳ್ಯ ಹಲವಾರು ಠಾಣೆಗಳಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊದಿದ ಇವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು ಹಾಗೂ ಕೆ.ಪಿ. ಮಹಮ್ಮದ್ ಕಡೆಪಾಲ ಕಲ್ಲುಗುಂಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಅಪಘಾತ ರಹಿತ ಚಾಲನೆಗೆ ಮುಖ್ಯಮಂತ್ರಿಯಿಂದ ಚಿನ್ನದ ಪದಕ ಸ್ವೀಕರಿಸಿದ ಇವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹಮೀದ್ ಬೀಜ ಕೊಚ್ಚಿ,ದನಂಜಯ ಧನು ಹಾರ್ಡ್ವೇರ್, ಲತೀಫ್ ಹರ್ಲಡ್ಕ, ಇಸ್ಮಾಯಿಲ್ ಅಹ್ಸನಿ, ಅಬ್ದುಲ್ ರಶೀದ್ ಝೈನಿ ಪೆರಾಜೆ, ಖಾದರ್ ಸಂಗಂ, ಸಿದ್ದೀಕ್ ಕಟ್ಟೆಕ್ಕಾರ್,ಪೈಝಲ್ ಕಟ್ಟೆಕ್ಕಾರ್,ಸಮೀರ್,ಸಮದ್ ಹಾಜಿ,ಉಬೈಸ್,ನಾಸಿರ್, ರಹೀಂ ಕಲ್ಲಪಳ್ಳಿ,ಮಜೀದ್ ಮಾಂಬ್ಳಿ, ಮಹಮ್ಮದ್ ಹೈಫಾ, ಮಹಮ್ಮದ್ ಪೈಂಟರ್, ಖಾದರ್ ಆಲೆಟ್ಟಿ, ಮಹಮ್ಮದ್ ಸಿ.ಎ, ಮಹಮ್ಮದ್ ಬಾಂಬೆ, ಅಝೀಝ್ ಫೂಟ್ವೇರ್, ಹನೀಫ್ ಕಲ್ಲಪಳ್ಳಿ,ಬಶೀರ್ ಕಲ್ಲುಮುಟ್ಳು,ಪಯಾಝ್ ಮಾಂಬ್ಳಿ, ಅಝೀಝ್ ಬೋರು ಗುಡ್ಡೆ, ಅಬೂಬಕ್ಕರ್ ಎಸ್.ಪಿ, ಖಾದರ್ ಹಣಗೇರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮ ಹಾರಿಸ್ ಬೋರು ಗುಡ್ಡೆ ಸ್ವಾಗತಿಸಿದರು,ನಿರೂಪಣೆ ಸಿದ್ದೀಕ್ ಬಿ.ಎ ನಿರ್ವಹಿಸಿದರು,ದನ್ಯವಾದ ನೌಶಾದ್ ಕೆ.ಎಮ್ ಸಲ್ಲಿಸಿದರು.ಮೀಡಿಯಾ ಆಬಿದ್ ಕಲ್ಲುಮುಟ್ಳು ರವರು ನಿರ್ವಹಿಸಿದರು.ಕೊನೆಯಲ್ಲಿ ಸಿಹಿ ತಿಂಡಿ ಹಂಚಲಾಯಿತು.

m

Related Posts