ನೂತನ ಸಾರಥ್ಯ:– ಅಧ್ಯಕ್ಷರಾಗಿ ಹಕೀಮ್, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್, ಕೋಶಾಧಿಕಾರಿಯಾಗಿ ರಿಯಾಝ್ ಸಅದಿ, ಉಪಾಧ್ಯಕ್ಷರಾಗಿ ಸಿರಾಜ್
ಸುಳ್ಯ:- ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಗಾಂಧಿನಗರ ಯೂನಿಟ್ ವಾರ್ಷಿಕ ಮಹಾಸಭೆಯು ನವೆಂಬರ್ 27 ರಂದು ಸುಳ್ಯ ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ಕಮಾಲ್ ಕೆ ಎ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೈಫುದ್ದೀನ್ ಅಶ್ರಫಿ ದುಆ ಮೂಲಕ ಚಾಲನೆ ನೀಡಿದರು, ಕಾರ್ಯಕ್ರವನ್ನು ಸಿರಾಜ್ ಮುಸ್ಲಿಯಾರ್ ಉದ್ಘಾಟಿಸಿದರು, ವರದಿ ಮತ್ತು ಲೆಕ್ಕ ವಾಚನ ವನ್ನು ಪ್ರಧಾನ ಕಾರ್ಯದರ್ಶಿ ಮುಸ್ತಾಫಾ ವಾಚಿಸಿದರು, ವೀಕ್ಷಕರಾಗಿ ಸುಳ್ಯ ಸೆಕ್ಟರ್ ಕೋಶಾಧಿಕಾರಿ ನಾಸಿರ್ ಎಲಿಮಲೆ ಸಭೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಅತಿಥಿಗಳಾಗಿ ನೌಶಾದ್ ಕೆರೆಮೂಲೆ, ಆರಿಸ್ ಸಿ ಎ, ತಸ್ರೀಫ್ ಎಲ್ ಎಲ್ ಬಿ, ಭಾಗವಹಿಸಿದ್ದರು.
ನೂತನ ಸಾರಥ್ಯ:

ನೂತನ ಸಮಿತಿ ಅಧ್ಯಕ್ಷರಾಗಿ ಹಕೀಮ್, ಉಪಾಧ್ಯಕ್ಷರಾಗಿ ಸಿರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್, ಕೋಶಾಧಿಕಾರಿಯಾಗಿ ರಿಯಾಝ್, G.D ಕಾರ್ಯದರ್ಶಿಯಾಗಿ ಕರ್ರಾರ್, QD ಕಾರ್ಯದರ್ಶಿಯಾಗಿ ಮುಸ್ತಾಫಾ, ದಅವಾ ಕಾರ್ಯದರ್ಶಿಯಾಗಿ ನಾಸಿರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಜರ್ರಾರ್, ಮತ್ತು ಉಬೈಸ್, ರೈಂಬೊ ಕಾರ್ಯದರ್ಶಿಯಾಗಿ ಅಬ್ರಾರ್ ಮತ್ತು ಫರಾಝ್, ಸಮಿತಿ ಸದಸ್ಯರಾಗಿ ಸ್ವಬಾಹ್ ಸಖಾಫಿ, ಆಬಿದ್, ಸೈಫುದ್ದೀನ್ ಅಶ್ರಫಿ, ಬಶೀರ್, ಸಾದಿಕ್, ಕಮಾಲ್ ಕೆ ಎ, ಸಲ್ಮಾನ್ ಫಾರಿಸ್, ಫಯಾಝ್ ಮಾಂಬಿಳಿ, ರಿಯಾಝ್ ಕೆ ಎ, ಸಿಯಾದ್, ಮಫಾಝ್, ಶರ್ಫಾನ್ ಆಯ್ಕೆಯಾದರು. ನೂತನ ಕಾರ್ಯದರ್ಶಿ ಸಿರಾಜ್ ಪೆರಾಜೆ ವಂದಿಸಿದರು.





m
