ಮಂಗಳೂರು : ಹೆಚ್ಚು ಕುತೂಹಲ ಮೂಡಿಸಿದ್ದ ಕಡಬ ಪಟ್ಟಣ ಪಂಚಾಯಿತಿಯ 13 ವಾರ್ಡ್ಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ.
ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯ ವಾರ್ಡ್ನಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಹಮ್ಮದ್ ಪೈಝಲ್ 320 ಮತಗಳನ್ನು ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಲ್ಲಿ ನಾಲ್ಕು ಪ್ರಮುಖ ಅಭ್ಯರ್ಥಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಬಿಜೆಪಿ, ಎಸ್ಡಿಪಿಐ ಹಾಗೂ ಮುಸ್ಲಿಂ ಲೀಗ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಆದರೆ ಅಂತಿಮವಾಗಿ ಮತದಾರರು ಮಹಮ್ಮದ್ ಪೈಝಲ್ ಅವರ ಪರ ನಿರ್ಧಾರ ಕೈಗೊಂಡರು.
ಫಲಿತಾಂಶ ಹೀಗಿದೆ:
ಕಾಂಗ್ರೆಸ್ – ಮಹಮ್ಮದ್ ಪೈಝಲ್ : 320 ಮತಗಳು
ಬಿಜೆಪಿ – ಆದಂ ಕುಂಡೋಳಿ : 75 ಮತಗಳು
ಎಸ್ಡಿಪಿಐ – ಹಾರಿಸ್ ಕಳಾರ : 6 ಮತಗಳು
ಮುಸ್ಲಿಂ ಲೀಗ್ – ಕೆ. ಅಬ್ದುಲ್ ರಝಾಕ್ : 2 ಮತಗಳು
ಯುವ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಮ್ಮದ್ ಪೈಝಲ್, ತಮ್ಮ ಮೊದಲ ಪ್ರಯತ್ನದಲ್ಲಿಯೇ ವಿಶ್ವಾಸಾರ್ಹ ಗೆಲುವು ದಾಖಲಿಸಿದ್ದಾರೆ.





m

