Featured, ಸ್ಥಳೀಯ

ಅರಂತೋಡು: ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿದ್ಯಾಥಿಗಳ ಇಸ್ಲಾಮಿಕ್ ಕಲೋತ್ಸವಕ್ಕೆ ಅದ್ದೂರಿ ಚಾಲನೆ

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಮತ್ತು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್, ನುಸ್ರತುಲ್ ಇಸ್ಲಾಂ ಮದರಸಾ ಅರಂತೋಡು ಇವರ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಮಸೀದಿ ವಠಾರದಲ್ಲಿ ವಿಜೃಂಭಣೆಯಿಂದ ಪ್ರಾರಂಭಿಸಲಾಯಿತು.

ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದು, ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟೆಮನೆ ಅವರು ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್, ಸದರ್ ಅಶ್ರಫ್ ಮುಸ್ಲಿಯಾರ್, ಮದರಸಾ ಸಂಚಾಲಕ ಅಮೀರ್ ಕುಕ್ಕುಂಬಳ, ಜಮಾಅತ್ ಕಾರ್ಯದರ್ಶಿ ಮೂಸನ್, ಸ್ವಲಾತ್ ಸಮಿತಿ ಕೋಶಾಧಿಕಾರಿ ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಅಬ್ದುಲ್ ಖಾದರ್ ಪಟೇಲ್, ಅನಿವಾಸಿ ಭಾರತೀಯ ಅನ್ವರ್, ಎಚ್. ವೈ ಎ ಪ್ರಧಾನ ಕಾರ್ಯದರ್ಶಿ ಫಸಿಲು, ಅಧ್ಯಾಪಕ ಅಬ್ದುಲ್ ರಹಿಮಾನ್ ಕುಂಬ್ರ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್.

m

Related Posts