ಅಧ್ಯಕ್ಷರಾಗಿ ಉಮ್ಮರ್ ಗುಲ್ಮಕಜೆ, ಕಾರ್ಯದರ್ಶಿಯಾಗಿ ಫಾರೂಕ್ ಕಾನಕ್ಕೋಡ್, ಕೋಶಾಧಿಕಾರಿಯಾಗಿ ರುಶೈದ್ ಕೆ ಆರ್,
ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ (ರಿ) ಕಲ್ಲುಗುಂಡಿ 12ನೇ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ ಇತ್ತೀಚಿಗೆ ಹಯಾತುಲ್ ಇಸ್ಲಾಂ ಮದರಸ ಚಟ್ಟೆಕಲ್ಲಿನಲ್ಲಿ ಸಿ ಎಫ್ ಸಿ (ರಿ) ಅಧ್ಯಕ್ಷರಾದ ಯಾಸಿರ್ (ಪೊಲೀಸ್) ರವರ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯದರ್ಶಿ ಅಮೀರ್ ಕೆ ಎಚ್ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ಹಾಶಿಮ್ ಕೆ ಎಚ್ ಸ್ವಾಗತಿಸಿ, ಫಾರೂಕ್ ಕಾನಕ್ಕೋಡ್ ವಂದಿಸಿದರು.
ನೂತನ ಸಮಿತಿ ರಚನೆ : ಗೌರವಾದ್ಯಕ್ಷರಾಗಿ ಹಸನ್ ಪ್ರಗತಿ, ಅಧ್ಯಕ್ಷರಾಗಿ ಉಮ್ಮರ್ ಗುಲ್ಮಕಜೆ, ಉಪಾಧ್ಯಕ್ಷರಾಗಿ ಹಸೈ ಕೆಎಲ್ ಜಿ, ಕಾರ್ಯದರ್ಶಿಯಾಗಿ ಫಾರೂಕ್ ಕಾನಕ್ಕೋಡ್, ಜೊತೆ ಕಾರ್ಯದರ್ಶಿಯಾಗಿ ಅಮೀರ್ ಕೆ ಎಚ್, ಕೋಶಾಧಿಕಾರಿ ಯಾಗಿ ರುಶೈದ್ ಕೆ ಆರ್, ಸಮಿತಿ ಸದಸ್ಯರಾಗಿ ಸ್ವಾದಿಕ್ ಮಾಸ್ಟರ್, ಹಾಶಿಮ್ ಕೆ ಎಚ್, ಆಸೀಫ್ ಕೆ ಎಸ್, ಅರ್ಷಾಬ್ ಕಡೆಪಾಲ, ಮಹಮ್ಮದ್ ಹನೀಫ್ ಚಟ್ಟೆಕಲ್ಲು ಹಾಗೂ ಅನಿವಾಸಿ ಪ್ರತಿನಿಧಿಗಳಾಗಿ ಶಾಕಿರ್ ಶೈನ್, ಸಾಬಿತ್ (ಆಬಿ), ಇರ್ಷಾದ್ ಎಂ ಎ ಇವರನ್ನು ಆಯ್ಕೆ ಮಾಡಲಾಯಿತು.





m
