ಮಳಲಿ: ಅಲ್ ಮಸ್ಜಿದುಲ್ ಬದ್ರಿಯಾ ಸಾನಬೆಟ್ಟು ಮಳಲಿ ಇವರ ಆಶ್ರಯದಲ್ಲಿ ಗ್ರಾಂಡ್ ಮೌಲಿದ್ ಹಾಗೂ ಜಾಲ್ಸೇ ಮೀಲಾದ್ ಮಕ್ಕಳ ಕಲಾ–ಸಾಹಿತ್ಯ ಸಂಗಮ ಕಾರ್ಯಕ್ರಮವು ಸೆಪ್ಟೆಂಬರ್ 14, 2025 ರಂದು ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಅಲ್ ಮಸ್ಜಿದುಲ್ ಬದ್ರಿಯಾ ಸಾನಬೆಟ್ಟು ಅಧ್ಯಕ್ಷ ಅಬ್ದುಲ್ ಹಮೀದ್ ಎಂ.ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜುಮಾ ಮಸೀದಿ ಮಳಲಿ ಖತೀಬ್ ಬಹು. ಮುಸ್ತಾಫಾ ಫೈಝಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಜುಮಾ ಮಸೀದಿ ಮಳಲಿ ಅಧ್ಯಕ್ಷ ಜನಾಬ್ ಅಬ್ದುಲ್ ರಝಾಕ್ ಹಾಗೂ ಅನೇಕ ಉಲಮಾ–ಉಮಾರ, ಪಂಡಿತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಅಲ್ ಮಸ್ಜಿದುಲ್ ಬದ್ರಿಯಾ ಸಾನಬೆಟ್ಟು ಸದರ್ ಮುಅಲ್ಲಿಮ್ ಬಹು. ಶಾಕಿರ್ ಆಝ್ಹಾರಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಮ್ರಾ ಯಾತ್ರೆಗೆ ತೆರಳುತ್ತಿರುವ ಸಮಾಜಸೇವಕ, ಕೊಡುಗೈಧನಿ ರೈಬೋ ಉಸ್ಮಾನ್ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ತಬರುಕ್ ವಿತರಿಸಲಾಯಿತು.




m
