Featured, ಇತರೆ, ಸ್ಥಳೀಯ

ಭಾರತೀಯ ಗಡಿಭದ್ರತಾ ಪಡೆಗೆ ಅಯ್ಕೆ ಯಾದ ಕು. ಸುಶ್ಮಿತಾ ಬೆದ್ರುಪಣೆಗೆ ಶಾಸಕರಿಂದ ಅಭಿನಂದನೆ ಹಾಗೂ ಸನ್ಮಾನ

ಇತ್ತೀಚೆಗಷ್ಟೆ ಭಾರತೀಯ ಗಡಿಭದ್ರತಾ ಪಡೆ (BSF)ಗೆ ಆಯ್ಕೆಯಾದ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು.ಸುಶ್ಮಿತಾ ಬೆದ್ರುಪಣೆ ಅವರಿಗೆ ಮಾನ್ಯ ಶಾಸಕರು ಮನೆಗೆ ಸ್ವತಃ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು ಹಾಗೂ ಸನ್ಮಾನಿಸಿದರು.

ಇತ್ತೀಚೆಗಷ್ಟೆ ಭಾರತೀಯ ಗಡಿಭದ್ರತಾ ಪಡೆ (BSF)ಗೆ ಆಯ್ಕೆಯಾದ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು.ಸುಶ್ಮಿತಾ ಬೆದ್ರುಪಣೆ ಅವರಿಗೆ ಮಾನ್ಯ ಶಾಸಕರು ಮನೆಗೆ ಸ್ವತಃ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು ಹಾಗೂ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸತೀಶ ನಾಯ್ಕ ಅರಂತೋಡು, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಪುಷ್ಪ ಮೇದಪ್ಪ ಉಳುವಾರು, ಸುಳ್ಯ ಮಂಡಲ ಸಮಿತಿಯ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೆನಾಲ, ಭಾರತಿ ಉಳುವಾರು, ಗುತ್ತಿಗೆದಾರ ನವೀನ್ ಚಂದ್ರ ಗುತ್ತು, ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯ ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.

m

Related Posts