Featured, ಅಂಕಣ, ಸ್ಥಳೀಯ

ಪೆರಾಜೆಯಲ್ಲಿ ಅಲ್ ಅಮಿನ್ ಚಾರಿಟೆಬಲ್ ಟ್ರಸ್ಟ್ (ರಿ) ಮೆಹ್‌ಫಿಲೇ ಮದೀನ–2025 :

ಐದು ದಿನಗಳ ಇಷ್ಕ್ ಮಜ್ಲಿಸ್, ಬುರ್ದಾ ಮಜ್ಲಿಸ್, ಸೂಫಿ ಖವಾಲಿ, ದಫ್ ಪ್ರದರ್ಶನ, ಧಾರ್ಮಿಕ ಮತಪ್ರಭಾಷಣ ಹಾಗೂ ಕಥಾ ಪ್ರಸಂಗಂ 

ಪೆರಾಜೆ:ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆ ವತಿಯಿಂದ 16ನೇ ವರ್ಷದ ಪ್ರಯುಕ್ತ “ಮೆಹ್‌ಫಿಲೇ ಮದೀನ–2025” ಎಂಬ ಬೃಹತ್ ಇಷ್ಕ್ ಮಜ್ಲಿಸ್ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಉತ್ಸವವನ್ನು ನವೆಂಬರ್ 21ರಿಂದ 25ರವರೆಗೆ ಪೆರಾಜೆ ಮೈದಾನದಲ್ಲಿ ವೈಭವೋಪೇತವಾಗಿ ಆಯೋಜಿಸಲಾಗಿದೆ.

ಐದು ದಿನಗಳ ಈ ಬೃಹತ್ತಾದ ಕಾರ್ಯಕ್ರಮದಲ್ಲಿ ಇಷ್ಕ್ ಮಜ್ಲಿಸ್, ಬುರ್ದಾ ಮಜ್ಲಿಸ್, ಸೂಫಿ ಖವಾಲಿ, ದಫ್ ಪ್ರದರ್ಶನ, ಧಾರ್ಮಿಕ ಮತಪ್ರಭಾಷಣ ಹಾಗೂ ಕಥಾ ಪ್ರಸಂಗಂ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ನವೆಂಬರ್ 21ರಂದು (ಶುಕ್ರವಾರ) ಇಷ್ಕ್ ಮಜ್ಲಿಸ್ ಕಾರ್ಯಕ್ರಮಕ್ಕೆ ಬನಾರಿ ಯೂಸುಫ್ ಸಖಾಫಿ ಅಲ್ ಕಾಮಿಲ್ ಉದ್ಘಾಟನೆ ನೆರವೇರಿಸಲಿದ್ದು, ಅನ್ವರ್ ಅಲಿ ಹುದವಿ ನೇತೃತ್ವ ವಹಿಸಲಿದ್ದಾರೆ.

ನವೆಂಬರ್ 22ರಂದು (ಶನಿವಾರ) ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಪ್ರಭಾಷಣ ನೀಡಲಿದ್ದು, ಮುಖ್ಯ ಪ್ರಭಾಷಣವನ್ನು ಅಹ್ಮದ್ ಕಬೀರ್ ಬಾಖವಿ ಕಾಂಞಾರ್ ರವರು ನೀಡಲಿದ್ದಾರೆ.

ನವೆಂಬರ್ 23ರಂದು (ಆದಿತ್ಯವಾರ) ಬುರ್ದಾ ಮಜ್ಲಿಸ್ ಮತ್ತು ಸೂಫಿ ಖವಾಲಿ ನಡೆಯಲಿದ್ದು, ಶುಕೂರ್ ಇರ್ಫಾನಿ, ನಾಸಿಫ್ ಕ್ಯಾಲಿಕಟ್ ಹಾಗೂ ಮೆಹ್ಫೂಝ್ ರಿಹಾನ್ ಕ್ಯಾಲಿಕಟ್ ನೇತೃತ್ವ ವಹಿಸಲಿದ್ದಾರೆ. ಸೂಫಿ ಖವಾಲಿ ಕಾರ್ಯಕ್ರಮದಲ್ಲಿ ಲಿರಾರ್ ಅಮಿನಿ (ಲಕ್ಷದ್ವೀಪ್) ರವರು ಕಲಾ ಪ್ರದರ್ಶನ ನೀಡಲಿದ್ದಾರೆ.

ನವೆಂಬರ್ 24ರಂದು (ಸೋಮವಾರ) ಕಥಾ ಪ್ರಸಂಗಂ ಕಾರ್ಯಕ್ರಮದಲ್ಲಿ ಸಿಕೆಎಸ್ ಅಬ್ದುಸ್ಸಲಾಂ ಮೌಲವಿ ಮಣ್ಣಾರ್ಕಾಡ್ ನೇತೃತ್ವ ವಹಿಸಲಿದ್ದು, ಮುಹಮ್ಮದ್ ರಿಯಾಝ್ ಮದೀನಿ ಪ್ರಭಾಷಣ ನೀಡಲಿದ್ದಾರೆ.

ಉತ್ಸವದ ಕೊನೆಯ ದಿನವಾದ ನವೆಂಬರ್ 25ರಂದು (ಮಂಗಳವಾರ) ಪೆರಾಜೆ ಸಿಲ್ ಸಿಲಾ ನಡೆಯಲಿದ್ದು, ದುವಾ ಕಾರ್ಯಕ್ರಮವನ್ನು ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ನೆರವೇರಿಸಲಿದ್ದಾರೆ. ಪ್ರಭಾಷಣವನ್ನು ಉಸ್ಮಾನ್ ಜೌಹರಿ ನೆಲ್ಯಾಡಿ ನೀಡಲಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ವ್ಯವಸ್ಥೆಯಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಸೌಲಭ್ಯ ಕಲ್ಪಿಸಲಾಗಿದೆ.

ಸರ್ವರಿಗೂ ಆತ್ಮೀಯ ಆಹ್ವಾನ ನೀಡಿರುವವರು — ಅಧ್ಯಕ್ಷರು ಮತ್ತು ಸರ್ವ ಸದಸ್ಯರು,ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆ.

 

m

Related Posts