Featured, ಇತರೆ, ಸ್ಥಳೀಯ

ಸುಳ್ಯದಲ್ಲಿ ಬಿರುಸುಗೊಂಡ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಚುನಾವಣೆ ಚಟುವಟಿಕೆ !!..

ಸಲ್ಲಿಸಿದ ಎಲ್ಲಾ 20 ನಾಮಪತ್ರಗಳು ಮಾನ್ಯ : ಇಬ್ಬರು ಸದಸ್ಯರು ಪ್ರತಿಸ್ಪರ್ಧಿ ಇಲ್ಲದೆ ಅವಿರೋಧ ಅಯ್ಕೆ!

ಸುಳ್ಯ, ಅ. 26: ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಬೆಳ್ಳಾರೆ ಮತ್ತು ಈಶ್ವರಮಂಗಲದಲ್ಲಿ ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಚುನಾವಣಾ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ

ನವೆಂಬರ್‌ 2ರಂದು 13 ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಒಟ್ಟು 20 ಮಂದಿ ಸದಸ್ಯರು ನಾಮಪತ್ರಗಳನ್ನು ಸಲ್ಲಿಸಿದ್ದರು. ಇಂದು ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಯಿತು. ಎಲ್ಲಾ 20 ನಾಮಪತ್ರಗಳು ಮಾನ್ಯವೆಂದು ಘೋಷಿಸಲ್ಪಟ್ಟಿದೆ

ಹಿಂದುಳಿದ ವರ್ಗ ‘A’ ಒಂದು ಸ್ಥಾನ ಹಾಗೂ ಹಿಂದುಳಿದ ವರ್ಗ ‘B’ ಒಂದು ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ, ಈ ಎರಡೂ ಸ್ಥಾನಗಳಿಗೆ ನೇರವಾಗಿ ಅವಿರೋಧ ಆಯ್ಕೆ ಘೋಷಣೆಯಾಗಿದೆ. ಹಿಂದುಳಿದ ವರ್ಗ ‘A’ ವರ್ಗದಿಂದ ಸಂಘದ ಹಾಲಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಹಾಗೂ ಹಿಂದುಳಿದ ವರ್ಗ ‘B’ ವರ್ಗದಿಂದ ಜಾಜ್೯ ಡಿ’ಸೋಜಾ ಅವರು ಯಾವುದೇ ಪ್ರತಿಸ್ಪರ್ಧಿಯಿಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ 11 ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ ಅದರಲ್ಲಿ ಮಹಿಳಾ ಮೀಸಲು ಎರಡು ಸ್ಥಾನ ಮತ್ತು ಸಾಮಾನ್ಯ ಸ್ಥಾನಕ್ಕೆ 9 ನಿರ್ದೇಶಕರು ಅಯ್ಕೆ ಯಾಗಬೇಕು ಇದೀಗ ಮಹಿಳಾ ಮೀಸಲು ಸ್ಥಾನಕ್ಕೆ ಈಗಾಗಲೇ ಅಪೋಲಿನ್ ಡಿ ಸೋಜ, ಅಮೀನಾ ಎಸ್ ಜಯನಗರ, ಸಾಜಿದಾ ಜಿ ಎ, ಜೂಲಿಯಾನ ಕ್ರಾಸ್ತಾ, ನಾಲ್ಕು ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ,

ಇನ್ನೂ ಸಾಮಾನ್ಯ ವರ್ಗದ 9 ನಿರ್ದೇಶಕ ಸ್ಥಾನಕ್ಕೆ ಉಮ್ಮರ್ ಕೆ ಎಸ್ , ಸಂಶುದ್ದೀನ್ ಎಸ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಇಬ್ರಾಹಿಂ ಕತರ್,ಬಾಪು ಸಾಹೀಬ್, ಎ ಕೆ ಹಸೈನಾರ್ ಕಲ್ಲುಗುಂಡಿ, ಎಸ್ ಕೆ ಹನೀಫ ಸಂಪಾಜೆ, ಅಬ್ದುಲ್ ರಹೀಮಾನ್, ಮಹಮ್ಮದ್ ರಫೀಕ್ ಸಿ ಎಮ್, ಮೋಹಿದ್ದೀನ್ ಫ್ಯಾನ್ಸಿ, ಮಹಮ್ಮದ್ ಅನ್ಸಾರ್, ಅಬೂಬಕ್ಕರ್ ಸಿದ್ದೀಕ್ ಜಿ ಮಹಮ್ಮದ್ ಫೈಸಲ್,14 ನಾಮಪತ್ರ ಸಲ್ಲಿಕೆ ಯಾಗಿದೆ ಇನ್ನೂ ಇನ್ನೂ ನಾಳೆ ದಿನಾಂಕ 27/10/2025 ರಂದು ನಾಮಪತ್ರ ಹಿಂದೆಗೆಯಲು ಕೊನೆಯ ದಿನವಾಗಿರುತ್ತದೆ ಈ ನಡುವೆ ಚುನಾವಣೆ ನಡೆಯಬೇಕೆ ಅಥವಾ ಅವಿರೋಧ ಅಯ್ಕೆ ನಡೆಯಬೇಕೆ ಎಂಬ ನಿಟ್ಟಿನಲ್ಲಿ ಇಂದು ಸಂಜೆ ಸಂಘದ ಮಾಜಿ ಅಧ್ಯಕ್ಷರು, ಸಮುದಾಯಗಳ ಸಹಕಾರಿ ಮುಖಂಡರ ಸಮ್ಮುಖದಲ್ಲಿ ಉನ್ನತ ಮಟ್ಟದ ಸಭೆ ನಡೆಯಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ ಇನ್ನೂ ಸಭೆಯಲ್ಲಿ ಒಮ್ಮತದ ತೀರ್ಮಾನ ಆಗದೆ ಇದ್ದರೆ ನವಂಬರ್ ಎರಡರಂದು ಮತದಾನದ ಹಕ್ಕು ಪಡೆದ ಸಂಘದ 254 ಸದಸ್ಯರು ಚುನಾವಣೆ ಮೂಲಕ 11 ನಿರ್ದೇಶಕರನ್ನು ಅಯ್ಕೆ ಮಾಡಲಿದ್ದಾರೆ ಎಲ್ಲದಕ್ಕೂ ಇಂದಿನ ಉನ್ನತ ಮಟ್ಟದ ಸಭೆ ಮಹತ್ವವಾಗಲಿದೆ.

Related Posts