Featured, ಇತರೆ, ಸ್ಥಳೀಯ

ಜೆಸಿಐ ಸುಳ್ಯ ಸಿಟಿ 2026ರ ನೂತನ ಆಡಳಿತ ಮಂಡಳಿ ರಚನೆ – ಮಹಿಳಾ ನಾಯಕತ್ವಕ್ಕೆ ಗೌರವ

ಜೆಸಿಐ ಸುಳ್ಯ ಸಿಟಿ ಘಟಕದ 2026ನೇ ಸಾಲಿನ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷೆಯಾಗಿ ನಾಗವೇಣಿ ಕೋರಡ್ಕ ಹಾಗೂ ಕಾರ್ಯದರ್ಶಿಯಾಗಿ ಜೇಸಿ ತೇಜಸ್ವಿ ಪ್ರಕಾಶ್ ನಾರ್ಕೋಡು ಅವರನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ನಾಯಕತ್ವದ ಬೆಳವಣಿಗೆಗೆ ವೇದಿಕೆಯಾಗಿರುವ ಈ ಆಯ್ಕೆಯನ್ನು ಸದಸ್ಯರು ಹರ್ಷದಿಂದ ಸ್ವಾಗತಿಸಿದ್ದಾರೆ. ಘಟಕದ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಜೆಸಿಐ ಸುಳ್ಯ ಸಿಟಿ ಘಟಕದ 2026 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಜೇಸಿ ನಾಗವೇಣಿ ದಾಮೋದರ ಕೋರಡ್ಕ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ ಜೇಸಿ ತೇಜಸ್ವಿ ಪ್ರಕಾಶ್ ನಾರ್ಕೋಡು, ಉಪಾಧ್ಯಕ್ಷರಾಗಿ ಜೇಸಿ ಪ್ರಮೀಳಾ ಮನಮೋಹನ್ ಬಳ್ಳಡ್ಕ, ಜೇಸಿ ಹಿತೇಶ್ ಕುಮಾರ್, ಜೇಸಿ ತಿರುಮಲೇಶ್ವರ , ಜೇಸಿ ನೇಮಿತ್ ರವರು ಆಯ್ಕೆಗೊಂಡಿರುತ್ತಾರೆ.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಜೇಸಿ ವಿಷ್ಣುಪ್ರಕಾಶ್ ನಾರ್ಕೋಡು, ಘಟಕದ ಸ್ಥಾಪಕರಾದ ಜೇಸಿ ಮನಮೋಹನ್ ಬಳ್ಳಡ್ಕ, ಜೆಸಿಐ ವಲಯ 15 ರ ವಲಯಾಧಿಕಾರಿ ಜೇಸಿ ಚಂದ್ರಶೇಖರ ಕನಕಮಜಲು ಮತ್ತು ಪೂರ್ವಾಧ್ಯಕ್ಷರಾದ ಜೇಸಿ ವಿನಯ್ ರಾಜ್ ಮಡ್ತಿಲ ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

Related Posts