ವಕ್ಫ್ ಆಸ್ತಿಗಳ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ : ಟಿ. ಎಂ. ಶಹೀದ್
ದ. ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಸುಳ್ಯ ತಾಲೂಕಿನ ಎಲ್ಲಾ ಮಸೀದಿ, ಮದ್ರಸ, ಖಬರಸ್ತಾನಮತ್ತು ದರ್ಗಾ ಗಳ ಡಾಟಾ ವನ್ನು ಉಮ್ಮೀದ್ ಪೋರ್ಟಲ್ ನಲ್ಲಿ ತಂತ್ರಾoಶ ದ ಸ್ಥಳದಲ್ಲೇ ತಂತ್ರಾoಶ ದ ಮೂಲಕ ದಾಖಲಿಸುವ ನೋಂದಣಿ ಶಿಬಿರ ಮತ್ತು ಮಾಹಿತಿ ಕಾರ್ಯಾ ಗಾರ ಏರ್ಪಡಿಸಲಾಗಿತ್ತು
ಅಧ್ಯಕ್ಷ ತೆಯನ್ನು ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ವಹಿಸಿದ್ದರು
ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ ಶಹೀದ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಹಿರಿಯರು ಆಸ್ತಿ ಗಳನ್ನು ದೇವರ ಕಾರ್ಯಕ್ಕೆ ದಾನವಾಗಿ ಸಮರ್ಪಸುವುದೇ ವಕ್ಫ್ ಅದರ ಸಂರಕ್ಷಣೆ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎಂದರು
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಶುಭಾಶoಸನೆ ಗೈದರು
ವೇದಿಕೆ ಯಲ್ಲಿ ಕೆಪೆಕ್ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ಸುಳ್ಯ ಅಲ್ಪ ಸಂಖ್ಯಾತರ ಸಹಕಾರಿ ಸಂಘ ದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ಇಬ್ರಾಹಿಂ ಹಾಜಿ ಮಂಡೆಕೋಲು,ಅನ್ಸಾರಿಯ ಸೆಂಟರ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್, ಕಾರ್ಯದರ್ಶಿ ಲತೀಫ್ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು ನಗರ ಪಂಚಾಯತ್ ನಿಕಟಪೂರ್ವ ಸದಸ್ಯ ಕೆ. ಎಸ್. ಉಮ್ಮರ್ ಸ್ವಾಗತಿಸಿ ವಂದಿಸಿದರು.





m

