Featured, ಅಂಕಣ, ಇತರೆ, ಸ್ಥಳೀಯ

ಎಸ್ ವೈ ಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿಯಿಂದ ಮುಹಮ್ಮದ್ ಕುಂಬಕ್ಕೊಡ್ ರವರಿಗೆ ಸನ್ಮಾನ

ಪುತ್ತೂರು: ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಕರ್ನಾಟಕ ಇದರ ದ.ಕ ಈಸ್ಟ್ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಚರಿಸಲಿರುವ ಸಾಂತ್ವನ-ಇಸಾಬ ಸನ್ನಧ್ದ ತಂಡ ‘ರಿಫ್‌ಅ’ ಎಂಬ ಹೆಸರಿನಲ್ಲಿ ವಿಶೇಷ ಫಿಸಿಕಲ್ ತರಬೇತಿ ಶಿಬಿರ ನವಂಬರ್ 12 ರಂದು ಮುಹಮ್ಮದ್ ಕುಂಞ್ಞಿ ಗೂನಡ್ಕ ರವರ ಎಸ್ಟೇಟ್‌ನಲ್ಲಿ ನಡೆಯಿತು. ಸಂಘ ಕುಟುಂಬದ ಹಿರಿಯರು ಶ್ರಮಜೀವಿ,ಸಾಂತ್ವನ ಕಾರ್ಯಗಳನ್ನು ಮಾಡುತ್ತಾ ಜನಮೆಚ್ಚುಗೆ ಪಡೆದ ಮುಹಮ್ಮದ್ ಕುಂಞ್ಞಿ ಕುಂಬಕ್ಕೋಡು ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಜಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ,ಅಬೂ ಶಜಾ ಅಬ್ದುರ್ರಜಾಕ್ ಕಾಸಿಮಿ ಕೂರ್ನಡ್ಕ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಾಂತ್ವನ ಕಾರ್ಯದರ್ಶಿ ಉಸ್ಮಾನ್ ಸೊಂಕೀಲ,ಸಲೀಂ ಕನ್ಯಾಡಿ,ಜಮಾಲ್ ಲತೀಫಿ,ಫೈಝಲ್ ಜುಹ್ರಿ, ಸಿದ್ಧೀಕ್ ಗೂನಡ್ಕ,ಹಾಗೂ ಹಲವಾರು ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು.

m

Related Posts