ಇತರೆ, ಸ್ಥಳೀಯ

ಬಿಹಾರದಲ್ಲಿ ಎನ್‌.ಡಿ.ಎ ಭರ್ಜರಿ ವಿಜಯ — ಜನಾದೇಶದಿಂದ ಪ್ರಧಾನಮಂತ್ರಿ ಮೋದಿ ನಾಯಕತ್ವಕ್ಕೆ ಮತ್ತೊಂದು ಮನ್ನಣೆ

ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಜನಮನ್ನಣೆ; 2028ರಲ್ಲಿ ಕರ್ನಾಟಕದಲ್ಲೂ ಪರಿವರ್ತನೆಯ ವಿಶ್ವಾಸ : ಭಾಗೀರಥಿ ಮುರುಳ್ಯ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎನ್‌.ಡಿ.ಎ ಒಕ್ಕೂಟದ ಅಲೆಗೆ ಕೊಚ್ಚಿಹೋಗಿರುವ ಸಂದರ್ಭದಲ್ಲಿ, ಬಿಜೆಪಿ ನೇತೃತ್ವದ ಎನ್‌.ಡಿ.ಎ ಪ್ರಚಂಡ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಏರಿರುವುದು ಸಂತಸದ ಸಂಗತಿಯಾಗಿದೆ ಎಂದು ಸುಳ್ಯ ಶಾಸಕಿ. ಭಾಗೀರಥಿ ಮುರುಳ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ರಹಿತ ಆಡಳಿತ, ದೇಶದ ಭದ್ರತೆ ಹಾಗೂ ಸಮಗ್ರ ಅಭಿವೃದ್ಧಿಯ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ದೇಶದ ಮೂಲೆ–ಮೂಲೆಗಳಲ್ಲಿ ಭದ್ರವಾಗಿ ನೆಲೆಯೂರಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ಸುಳ್ಳು ಭರವಸೆಗಳನ್ನು ಬಿಹಾರದ ಪ್ರಜ್ಞಾವಂತ ಮತದಾರರು ತಿರಸ್ಕರಿಸಿರುವುದು ಮೋದಿ ಆಡಳಿತದ ಜನಮನ್ನಣೆಗೆ ಮತ್ತೊಂದು ಸ್ಪಷ್ಟ ಪ್ರಮಾಣವಾಗಿದೆ.
ಮೂರು ರಾಜ್ಯಗಳಲ್ಲಿ ಜನತೆ ನೀಡಿರುವ ಸ್ಪಷ್ಟ ಜನಾದೇಶದ ಕ್ರಾಂತಿ 2028ರಲ್ಲಿ ಕರ್ನಾಟಕದಲ್ಲಿಯೂ ಪುನರಾವರ್ತನೆಗೊಳ್ಳಲಿದೆ ಎಂಬುದು ನಿಶ್ಚಿತ. ಕಾಂಗ್ರೆಸ್ ಸರ್ಕಾರದ ದುರಾಡಳಿತ, ಒಳಜಗಳ ಮತ್ತು ಅಭಿವೃದ್ಧಿ ಕುಂಟಿತದಿಂದ ಕರ್ನಾಟಕದ ಜನತೆ ಬೇಸರಗೊಂಡಿರುವುದು ಸ್ಪಷ್ಟವಾಗಿದೆ.
ಬಿಹಾರದ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಹಾಗೂ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜೊತೆಗೆ ಪಕ್ಷದ ಗೆಲುವಿಗೆ ಶ್ರಮಿಸಿದ ಪರಿಶ್ರಮಿ ಕಾರ್ಯಕರ್ತರಿಗೆ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಬಲಪಡಿಸಿದ ಬಿಹಾರದ ಎಲ್ಲಾ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು.

Related Posts