Featured, ಅಂಕಣ, ಸ್ಥಳೀಯ

ಅತ್ಯಂತ ಕಡಿಮೆ ಅವಧಿಯಲ್ಲಿ ವೈರಲ್ ಆದ ಸೂಫಿ ಖವ್ವಾಲಿ ಗಾಯಕ ಲಿರಾರ್ ಅಮಿನಿ ಇಂದು ಪೆರಾಜೆಯಲ್ಲಿ;

ಪ್ರವಾದಿ ಕೀರ್ತನೆಗಳಲ್ಲಿ ಜನ ಮನಸ್ಸುಗಳಲ್ಲಿ ವಿಶೇಷ ಸ್ಥಾನ ಪಡೆದ ಸುಪ್ರಸಿದ್ಧ ಗಾಯಕರಾದ ನಾಸಿಫ್ ಕ್ಯಾಲಿಕಟ್, ಮೆಹ್ಫೂಸ್ ರಿಹಾನ್ ಮತ್ತು ಶುಕೂರ್ ಇರ್ಪಾನಿ ತಂಡಂದಿಂದ ಬೃಹತ್ ಬುರ್ದಾ ಮಜ್ಲಿಸ್

ಪೆರಾಜೆ ಆಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆಯ 16 ನೇ ವಾರ್ಷಿಕ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿರುವ ಐದು ದಿನಗಳ ಇಸ್ಲಾಮಿಕ್ ಧಾರ್ಮಿಕ ಕಾರ್ಯಕ್ರಮದ ಸರಣಿಯಲ್ಲಿ ಇಂದು ಬುರ್ದಾ ಮಜ್ಲಿಸ್ ಹಾಗೂ ಸೂಫಿ ಖವ್ವಾಲಿ ನಡೆಯಲಿದೆ, ಬುರ್ದಾ ಮಜ್ಲಿಸ್ ಗೆ ಶುಕೂರ್ ಇರ್ಫಾನಿ, ನಾಸಿಫ್ ಕ್ಯಾಲಿಕಟ್, ಮೆಹ್ಪೂಝ್ ರಿಹಾನ್ ಕ್ಯಾಲಿಕಟ್ ನೇತೃತ್ವ ನೀಡಲಿದ್ದಾರೆ.

ರಾಜ್ಯಕ್ಕೆ ಪ್ರಪ್ರಥಮವಾಗಿ ಆಗಮಿಸಲಿರುವ ಸೂಫಿ ಖವ್ವಾಲಿ ಪ್ರಮುಖರಾದ ಲಿರಾರ್ ಅಮಿನಿ ಲಕ್ಷದ್ವೀಪ್ ನೇತೃತ್ವ ನೀಡಲಿದ್ದಾರೆ.

ಲಿರಾರ್ ಅಮಿನಿ ಲಕ್ಷದ್ವೀಪ್ ರವರ ಸೂಫಿ ಖವ್ವಾಲಿ ವೀಕ್ಷಿಸಲು ಪೆರಾಜೆ ಮಣ್ಣಿಗೆ ಸುತ್ತಮುತ್ತಲಿನ ಪ್ರದೇಶಗಳಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಎಂದು ಸಂಘಟಕರು ಇವಾರ್ತೆ ಗೆ ತಿಳಿಸಿದ್ದಾರೆ.

ಪೆರಾಜೆ, ಕೊಡಗು ಮೂಲದ ಅಲ್‌ ಅಮೀನ್‌ ಚಾರಿಟೇಬಲ್‌ ಟ್ರಸ್ಟ್‌ (ರಿ.) ತನ್ನ 16ನೇ ವಾರ್ಷಿಕೋತ್ಸವದ ಅಂಗವಾಗಿ ಐದು ದಿನಗಳ ಇಸ್ಲಾಮಿಕ್‌ ಧಾರ್ಮಿಕ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿದೆ. ಟ್ರಸ್ಟ್‌ನ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆಗಳ ಸ್ಮರಣಾರ್ಥವಾಗಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

‘ಮೆ ಫಿಲೆ ಮದೀನ’ ಎಂಬ ವಿಶೇಷ ಥೀಮ್‌ಅಡಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ವಿವಿಧ ಧಾರ್ಮಿಕ ಉಪನ್ಯಾಸಗಳು, ಕುರಾನ್‌ ಪಾಠ, ನೈತಿಕ ಮೌಲ್ಯಗಳ ಕುರಿತು ಬೋಧನೆ, ಯುವಕರಿಗಾಗಿ ಪ್ರೇರಣಾ ಸತ್ರಗಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡಿವೆ ಎಂದು ಸಂಘಟಕರು ಇವಾರ್ತೆಗೆ ಮಾಹಿತಿ ನೀಡಿದ್ದಾರೆ.

m

Related Posts