Featured, ಇತರೆ, ಸ್ಥಳೀಯ

ದುಬೈ ರನ್ನಲ್ಲಿ ಭಾಗವಹಿಸಿದ 3,07,000 ಓಟಗಾರರಿಗೆ ಅನಂತ ಧನ್ಯವಾದ ತಿಳಿಸಿದ ಶೈಖ್ ಹಮ್ದಾನ್;

ದುಬೈ ರನ್, ಕಾರ್ಯಕ್ರಮದಲ್ಲಿ ಸುಳ್ಯ ಜಟ್ಟಿಪಳ್ಳದ ಯುವಕರು ಬಾಗಿ

ದುಬೈ ರನ್ ಕಾರ್ಯಕ್ರಮದಲ್ಲಿ ಸುಮಾರು 3,07,000 ಜನರು ಭಾಗವಹಿಸಿದ್ದಾರೆ ಎಂದು ದುಬೈ ಕಿರೀಟ ಪ್ರಭು ಶೇಖ್ ಹಮ್ದಾನ್ ಬಿನ್ ಮೊಹಮದ್ ಬಿನ್ ರಶೀದ್ ಅಲ್ ಮಕ್ತೂಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಬಹಿರಂಗಪಡಿಸಿದ್ದಾರೆ.
ಈ ಕಾರ್ಯಕ್ರಮದ ವಿವಿಧ ಕೋನಗಳಿಂದ ತೆಗೆಯಲಾದ ವೀಡಿಯೊವನ್ನು ಒಡೆಸ್ಜಾ (ಫೀಟ್. ಬೆಟ್ಟಿ ಲಾ ವೆಟ್) ರವರ ‘ದಿ ಲಾಸ್ಟ್ ಗುಡ್ಬೈ’ ಗೀತೆಯ ಸಂಗೀತದ ಹಿನ್ನೆಲೆಯಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಅವರ ಪೋಸ್ಟ್‌ಗೆ ಕ್ಯಾಪ್ಷನ್‌ನಲ್ಲಿ ಇ “ದುಬೈ ರನ್ನಲ್ಲಿ ಭಾಗವಹಿಸಿದ 3,07,000 ಓಟಗಾರರಿಗೆ ಭವ್ಯವಾದ ಧನ್ಯವಾದಗಳು. ದುಬೈ ಎಂದಿಗೂ ಪ್ರೇರಣೆ ನೀಡುವುದನ್ನು ನಿಲ್ಲಿಸುವುದಿಲ್ಲ” ಎಂದು ಬರೆದಿದ್ದಾರೆ.
ದುಬೈ ಫಿಟ್ನೆಸ್ ಚಾಲೆಂಜ್‌ನ ಭಾಗವಾದ ದುಬೈ ರನ್‌ನ ಈ ವರ್ಷದ ಆವೃತ್ತಿ ಏಳನೆಯದಾಗಿದೆ. ದುಬೈ ಫಿಟ್ನೆಸ್ ಚಾಲೆಂಜ್ ಅನ್ನು ಶೇಖ್ ಹಮ್ದಾನ್ ಅವರು ಆರಂಭಿಸಿದರು

 

ಜಟ್ಟಿಪಳ್ಳದ ಯುವಕರು ಬಾಗಿ 

ದುಬೈ ರನ್ 2025 ರಲ್ಲಿ ಸುಳ್ಯ ಜಟ್ಟಿಪಳ್ಳದ ಯುವಕರಾದ ದುಬೈನಲ್ಲಿ ಉದ್ಯೋಗಿಯಾಗಿರುವ ರಿಯಾಝ್ ಬಿ.ಎ ಹಾಗೂ ಅಬ್ದುಲ್ ರವೂಫ್ ಬಿ.ಎ ಇವರು ಓಟದಲ್ಲಿ ಬಾಗಿಯಾದರು.

 

Related Posts