ಇತರೆ, ಸ್ಥಳೀಯ

ಪೆರಾಜೆ: ಮಳೆಯನ್ನು ಲೆಕ್ಕಿಸದೇ ಹರಿದು ಬಂದ ಜನಸ್ತೋಮ — ಯಶಸ್ವಿಯಾಗಿ ನಡೆದ ಮೆಹ್ ಫಿಲೇ ಮದೀನ’ ಮೂರನೇ ದಿನದ ಬುರ್ದಾ ಮಜ್ಲಿಸ್ ಮತ್ತು ಸೂಫಿ ಖವ್ವಾಲಿ

ಬುರ್ದಾ ಮಜ್ಲಿಸ್ ಕಾರ್ಯಕ್ರಮವನ್ನು ಸುಪ್ರಸಿದ್ಧ ಗಾಯಕರಾದ ನಾಸಿಫ್ ಕ್ಯಾಲಿಕಟ್, ಮೆಹ್ಫೂಸ್ ರಿಹಾನ್, ಶುಕೂರ್ ಇರ್ಪಾನಿ ತಂಡ ಭಕ್ತಿಭಾವಪೂರ್ಣವಾಗಿ ನಿರ್ವಹಿಸಿದರು. ಪ್ರವಾದಿ ಕೀರ್ತನೆಗಳ ಪ್ರತಿಧ್ವನಿ ಪೆರಾಜೆಯ ಸುತ್ತಮುತ್ತ ಆಧ್ಯಾತ್ಮಿಕ ನೆಮ್ಮದಿಯ ತಾರಂಗಣವನ್ನು ಸೃಷ್ಟಿಸಿತು

ಪೆರಾಜೆ

ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆ ವತಿಯಿಂದ ಮೆಹ್ ಫಿಲೇ ಮದೀನ ಮೂರನೇ ದಿನದ ಬುರ್ದಾ ಮಜ್ಲಿಸ್ ಹಾಗೂ ಸೂಫಿ ಖವ್ವಾಲಿ ಕಾರ್ಯಕ್ರಮ ಮಳೆಯನ್ನು ಲೆಕ್ಕಿಸದೇ ಕೂಡಿ ಬಂದ ಜನಸ್ತೋಮದ ಸಾಕ್ಷಿಯೊಂದಿಗೆ ಯಶಸ್ವಿಯಾಗಿ ನೆರವೇರಿತು

ಪ್ರವಾದಿ ಕೀರ್ತನೆಗಳಲ್ಲಿ ಜನ ಮನಸ್ಸುಗಳಲ್ಲಿ ವಿಶೇಷ ಸ್ಥಾನ ಪಡೆದ ಸುಪ್ರಸಿದ್ಧ ಗಾಯಕರಾದ ನಾಸಿಫ್ ಕ್ಯಾಲಿಕಟ್, ಮೆಹ್ಫೂಸ್ ರಿಹಾನ್ ಮತ್ತು ಶುಕೂರ್ ಇರ್ಪಾನಿ  ತಂಡಂದಿಂದ ಬೃಹತ್ ಬುರ್ದಾ  ಮಜ್ಲಿಸ್ ಕಾರ್ಯಕ್ರಮ ಸೌಮ್ಯ, ಮನಸಿಗೆ ಹಿತವಾದ ವಾತಾವರಣವನ್ನು ನಿರ್ಮಿಸಿ ಸೇರಿದ ಜನಸ್ತೋಮಕ್ಕೆ ಅಧ್ಯಾತ್ಮಿಕ ಸ್ಪರ್ಶದ ತರಂಗ ಸೃಷ್ಟಿಸಿತು ಪೆರಾಜೆ ಪರಿಸರದಲ್ಲಿ ನಡೆಯುತ್ತಿರುವ ‘ಮೆಹ್ ಫಿಲೇ ಮದೀನ’ ಕಾರ್ಯಕ್ರಮಕ್ಕೆ ಮಳೆ ವ್ಯತ್ಯಯ ಉಂಟಾದರೂ, ಸೇರಿದ ಜನರ ಉತ್ಸಾಹದಿಂದ ಕಾರ್ಯಕ್ರಮಕ್ಕೆ ಇಮ್ಮಡಿ ಕಳೆ ಇನ್ನಷ್ಟು ಕಂಗೊಳಿಸಿತು 

ಸೂಫಿ ಖವ್ವಾಲಿ ಕಲಾವಿದ ಲಿರಾರ್ ಅಮಿನಿ

ಲಕ್ಷದ್ವೀಪಿನಿಂದ ಕರ್ನಾಟಕದ ಮಣ್ಣಿಗೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ ಸೂಫಿ ಖವ್ವಾಲಿ ಕಲಾವಿದ ಲಿರಾರ್ ಅಮಿನಿ ಅವರ ಗಾಯನ, ಕೇವಲ ಸಂಗೀತವಾಗಿರಲಿಲ್ಲ—ಅದು ಮನಸ್ಸಿನ ಆಂತರಾಳವನ್ನು ಸ್ಪರ್ಶಿಸುವ ದಿವ್ಯ ತಾರಂಗಣವಾಗಿತ್ತು. ಅರ್ಥಗರ್ಭಿತ ಪದ್ಯಗಳನ್ನು ತಮ್ಮ ನಿಶ್ಶಬ್ದ ಭಕ್ತಿಯ ಸ್ವರದಲ್ಲಿ ಹೊಮ್ಮಿಸಿದ ಅವರ ಖವ್ವಾಲಿ, ಮಳೆಯ ಶಬ್ದವನ್ನೂ ಮೀರಿಸಿ ಸಭಿಕರ ಹೃದಯಗಳಿಗೆ ನೆಮ್ಮದಿಯ ಬೆಳಕನ್ನು ಹಚ್ಚಿದಂತಾಯಿತು. ಅವರ ಕಲಾತ್ಮಕ ಸ್ಪರ್ಶವು ಒಂದು ಕ್ಷಣಕ್ಕೆ ಅಧ್ಯಾತ್ಮದ ಸುಗಂಧದಿಂದ ತುಂಬಿಸಿ, ಕೇಳುಗರ ಮನಸ್ಸಿನಲ್ಲಿ ಆಳವಾದ ಮೌನ ಪ್ರಾರ್ಥನೆಯಂತೆಯೇ ಪ್ರತಿಧ್ವನಿಸಿತು.

ಕಾರ್ಯಕ್ರಮದ ಆಯೋಜಕರು ಹಾಗೂ ಸ್ವಯಂಸೇವಕರು ಉತ್ತಮ ವ್ಯವಸ್ಥೆ ಕಲ್ಪಿಸಿದ್ದು, ಭಾಗವಹಿಸಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ನಡೆಯುತ್ತಿರುವ ಈ ಸಮಾರಂಭವು ಶಿಸ್ತಿನ ವಾತಾವರಣದಲ್ಲಿ ಸಾಗುತ್ತಿದ್ದು, ಹಿರಿಯರು ಕಿರಿಯರು ಎನ್ನದೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

ವರದಿ : ರುನೈಸ್ ಕೊಯನಾಡು 

 

Related Posts