Featured, ಇತರೆ, ಸ್ಥಳೀಯ

ಕಾಸರಗೋಡು: ಹನಾನ್ ಶಾ ಸಂಗೀತ ಕಾರ್ಯಕ್ರಮದಲ್ಲಿ ತಿಕ್ಕಾಟ–ತಳ್ಳಾಟ; 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಸ್ಥಳಾವಕಾಶದ ಕೊರತೆ ಮತ್ತು ಪೂರ್ವತಯಾರಿ ಇಲ್ಲದೆ! ಕಾರ್ಯಕ್ರಮ ಆಯೋಜಿಸಿದ ಸಂಘಟಕರ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ!?

ಕಾಸರಗೋಡು: (ನವೆಂಬರ್23) ಹನನ್ ಶಾ ಅವರ ಸಂಗೀತ ಕಚೇರಿಯ ವೇಳೆ ತಿಕ್ಕಾಟ–ತಳ್ಳಾಟ ಸಂಭವಿಸಿ ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾರ್ಯಕ್ರಮ ಆರಂಭವಾಗುವ ಮೊದಲೇ ಜನರು ಇಲ್ಲಿ ಜಮಾಯಿಸಿದ್ದರು. ಇದರಿಂದ ನೂಕುನುಗ್ಗಲು ಉಲ್ಬಣವಾಗಿ, ಸುಮಾರು ಇಪ್ಪತ್ತು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ

ಸ್ಥಳಾವಕಾಶವಿಲ್ಲದಷ್ಟು ಜನರು ಸೇರಿದ್ದರಿಂದ ಈ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್‌ ಮುಖ್ಯಸ್ಥ ಬಿ.ವಿ. ವಿಜಯ ಭರತ್ ರೆಡ್ಡಿ ನೇತೃತ್ವದ ಪೊಲೀಸ್‌ ತಂಡ ಸ್ಥಳಕ್ಕೆ ತಲುಪಿ. ಸ್ವತಃ ಪೊಲೀಸ್‌ ಮುಖ್ಯಸ್ಥರು ಮೈಕ್ರೋಫೋನ್ ಮೂಲಕ ಜನರನ್ನು ಜಾಗರೂಕರಾಗಿರಲು ಎಚ್ಚರಿಕೆ ನೀಡಿದರು. ಈ ಮಧ್ಯೆ, ಕಾರ್ಯಕ್ರಮ ವೀಕ್ಷಿಸಲು ಬಂದು ತಿಕ್ಕಾಟ – ತಳ್ಳಾಟ ನಡೆಸಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಲಾಯಿತ್ತು. ಕೆಲವರು ಪೊದೆಗಳಲ್ಲಿನ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಥಿತಿ ಗಂಭೀರವಿಲ್ಲವೆಂದು ಮತ್ತು ಪರಿಸ್ಥಿತಿ ಇದೀಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts