ಯುವ ಜನತೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು : ಆತಂಕಕಾರಿ ಪರಿಣಾಮ, ಪರಿಹಾರ ಅಗತ್ಯ
ದೇಶದ ಭವಿಷ್ಯವೆಂದು ಕರೆಯಲ್ಪಡುವ ಯುವ ಜನತೆಯಲ್ಲೀಗ ಆತ್ಮಹತ್ಯೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವುದು ಸಮಾಜವನ್ನು ತೀವ್ರ ಆತಂಕದೊಳಗೆ ತಳ್ಳಿದೆ. ಶಿಕ್ಷಣದ ಒತ್ತಡ, ಉದ್ಯೋಗದ ಅನಿಶ್ಚಿತತೆ, ಕುಟುಂಬದ ನಿರೀಕ್ಷೆಗಳ ಬರೆ, ಪ್ರೀತಿಯ ವಿಫಲತೆ, ಸಾಮಾಜಿಕ ಜಾಲತಾಣದ ಹೋಲಿಕೆ ಸಂಸ್ಕೃತಿ – ಇವುಗಳ ನಡುವೆ ಸಿಲುಕಿರುವ ಯುವ ಮನಸ್ಸುಗಳು ಮೌನವಾಗಿ ನರಳಿ, ಕೊನೆಗೆ ಆತ್ಮಹತ್ಯೆಯಂತಹ ಅತಿರೇಕದ ನಿರ್ಧಾರಕ್ಕೆ ತಲುಪುತ್ತಿರುವುದು ದುಃಖದ ಸಂಗತಿ.

ಸುಳ್ಯ
ಗುತ್ತಿಗಾರು ಸಮೀಪದ ಚಿಕ್ಮುಳಿ ಬಳಿ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ.
ಮೃತ ಯುವತಿ ಚಿಕ್ಮುಳಿ ನಿವಾಸಿ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಪೂಜಾ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಪೂಜಾ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದರು. ತೀವ್ರ ಸ್ಥಿತಿಯಲ್ಲಿ ಇದ್ದ ಅವರನ್ನು ಎರಡು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ವೈದ್ಯರ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


