ಸಂಪಾಜೆ : ಎಸ್ ಡಿ ಪಿ ಐ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ನಡೆಯಿತು. ಸಂಪಾಜೆ ಗ್ರಾಮ ಪಂಚಾಯತ್ ನ 5 ವಾರ್ಡ್ ಗಳಲ್ಲಿಯೂ ಪಕ್ಷ ಸ್ಪರ್ಧಿಸುವುದಾಗಿ ತೀರ್ಮಾನಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಚಿಸಲಾಯಿತು. ಮೊದಲ ಸಂಭಾವ್ಯ ಪಟ್ಟಿಯಲ್ಲಿ 8 ಮಂದಿ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಿ ಬ್ಲಾಕ್ ಸಮಿತಿಗೆ ನೀಡಲಾಯಿತು.
ಪಕ್ಷ ಸೇರ್ಪಡೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಎಸ್ ಡಿ ಪಿ ಐ ಪಕ್ಷದ ಅಭಿಮಾನಿಗಳ ಹಾಗೂ ಹಿತೈಷಿಗಳ ಅಧಿಕೃತ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳ ಕೊನೆಯಲ್ಲಿ ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು .
ಸಭೆಯಲ್ಲಿ ಸುಳ್ಯ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ಗೂನಡ್ಕ, ಸುಳ್ಯ ಬ್ಲಾಕ್ ಸಮಿತಿ ಸದಸ್ಯರಾದ ಕಲಂದರ್ ಅರಂಬೂರು, ಬ್ರಾಂಚ್ ಸಮಿತಿ ಕಾರ್ಯದರ್ಶಿ ಮುನೀರ್ ಶೈನ್, ಮಾಧ್ಯಮ ಉಸ್ತುವಾರಿ ಅಡ್ವೋಕೇಟ್ ಬಾಸಿತ್, ಶರೀಫ್ ಸೆಟ್ಯಡ್ಕ , ಫಾರೂಕ್ ಕಾನಕ್ಕೋಡ್, ಆಶಿಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


