ದೊಡ್ಡಬಳ್ಳಾಪುರ: ಸಮಾಜದಲ್ಲಿ ಹೆಚ್ಚುತ್ತಿರುವ ನಶೆ, ಮದ್ಯಪಾನ, ಮಾದಕ ವ್ಯಸನ ಮತ್ತು ಧೂಮಪಾನದಂತಹ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದೊಡ್ಡಬಳ್ಳಾಪುರ ವತಿಯಿಂದ “ನಶಾಮುಕ್ತ ಅಭಿಯಾನ” ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ ನೈತಿಕ ಹಾಗೂ ಶಾರೀರಿಕ ಸದೃಢತೆಯ ಸಮಾಜ ನಿರ್ಮಾಣವೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಟೌನ್ ಪೊಲೀಸ್ ಸ್ಟೇಷನ್ನ ASI ನಾರಾಯಣಸ್ವಾಮಿ ಮಾತನಾಡಿ, “ಯುವಕರು ಇತ್ತೀಚಿನ ದಿನಗಳಲ್ಲಿ ಸುಲಭವಾಗಿ ನಶೆಗೆ ಅಡಿಪಡುತ್ತಿದ್ದಾರೆ. ಪೋಷಕರು ಮತ್ತು ಸಮಾಜವು ಅವರ ಮೇಲೆ ನಿಗಾ ಇಟ್ಟು ಮಾರ್ಗದರ್ಶನ ನೀಡುವುದು ಅತ್ಯಂತ ಅಗತ್ಯ” ಎಂದರು.
ಪ್ರೊಫೆಸರ್ ಇಕ್ಬಾಲ್ ಅವರು ಮಾತನಾಡಿ, ಮಕ್ಕಳಲ್ಲಿ ವ್ಯಸನದ ಅಭ್ಯಾಸ ಹೇಗೆ ಆರಂಭವಾಗುತ್ತದೆ ಹಾಗೂ ಅದಕ್ಕೆ ವಿರುದ್ಧವಾಗಿ ಶಿಕ್ಷಣ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ರೈತ ಮುಖಂಡರು ರಮೇಶ್ ಸಂಕ್ರಾಂತಿ ಅವರು ಮಾತನಾಡಿ ಹೈದರ್ ಅಲಿ,ಟಿಪ್ಪು ಸುಲ್ತಾನ್ ರವರ ಕಾಲದಲ್ಲೇ ಈ ನಶೆ ಸೇವನೆಯನ್ನು ನಿಷೇಧಿಸಿದರು, ಮತ್ತು ಈಗಿನ ಕಾಲದಲ್ಲಿ ನಡೆತಿರುವ ವಿದ್ಯಾರ್ಥಿಗಳ ಜೀವನ ವಿಧಾನ ಗಳನ್ನ ಹೇಳುತ್ತಾ ಚಿಂತಿಸಿದರು.
SDPI ದೊಡ್ಡಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್ ಹೇಳಿದರು: “ಯಾವುದೇ ಧರ್ಮದಲ್ಲೂ ನಶೆ ಮಾಡುವುದು ನಿಷೇಧಿತವಾಗಿದೆ. ವ್ಯಸನವು ವ್ಯಕ್ತಿಯ ವಿಚಾರಶಕ್ತಿ ಮತ್ತು ಧಾರ್ಮಿಕ ಜೀವನಕ್ಕೆ ಆಘಾತ ಉಂಟುಮಾಡುತ್ತದೆ.”
Dr ವೆಂಕಟೇಶ್ ಕುಮಾರ್ ರವರು ಮಾತನಾಡಿ ನಶೆ ಸೇವಿಸಿದರೆ ಅದರ ಪರಿಣಾಮದಿಂದ ಉಂಟು ಆಗುವ ಅನಾರೋಗ್ಯ ಸಂಬಂಧಿಸಿದ ವಿಚಾರಗಳು ಭಾಳಾ ಸ್ಪಷ್ಟವಾಗಿ ಹೇಳಿದರು.
SDPI ಜಿಲ್ಲಾ ನಾಯಕ ಅಯಾಜ್ ಅಹಮದ್ ಅವರು ಒಂದು ನಿದರ್ಶನವನ್ನು ಪ್ರಸ್ತಾಪಿಸಿ, ನಶೆಯ ಕಾರಣದಿಂದ ಜೀವನ ನಾಶಮಾಡಿಕೊಂಡ ಯುವಕನ ಕಥೆಯನ್ನು ವಿವರಿಸಿ, ಪೋಷಕರು ಮತ್ತು ಸಮಾಜ ಜಾಗರೂಕರಾಗಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾನ್ ಅವರು ಮಕ್ಕಳ ಸುರಕ್ಷತೆ ಮತ್ತು ವ್ಯಸನ ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಸ್ಪೂರ್ತಿದಾಯಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು SDPI ಜಿಲ್ಲಾ ಸದಸ್ಯ ಸೈಯದ್ ಬಾಬಾ ರವರು ಸಮರ್ಪಕವಾಗಿ ನಿರ್ವಹಿಸಿದರು. ಮುಖ್ಯ ಅತಿಥಿಗಳು ಹಾಗೂ ನಾಯಕರುಗಳಿಗೆ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಕೊನೆಯಾಗಿ SDPI ಉಪಾಧ್ಯಕ್ಷ ಮೊಹಮ್ಮದ್ ಇಮ್ರಾನ್ ಧನ್ಯವಾದಗಳನ್ನು ಅರ್ಪಿಸಿ, ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು.
ಈ ಸಂದರ್ಭ ASI ನಾಗರಾಜ್ ಟೌನ್ ಪೊಲೀಸ್ ಸ್ಟೇಷನ್, ರೈತ ಮುಖಂಡ ರಮೇಶ್ ಸಂಕ್ರಾಂತಿ, ಪ್ರೊಫೆಸರ್ ಇಕ್ಬಾಲ್, ತಾಲೂಕು ಅಧ್ಯಕ್ಷ ಫಯಾಜ್ ಅಹಮದ್, ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್, ಉಪಾಧ್ಯಕ್ಷ ಮೊಹಮ್ಮದ್ ಇಮ್ರಾನ್, ಕಾರ್ಯದರ್ಶಿ ಇಲಿಯಾಜ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾನ್, ಜಿಲ್ಲಾ ನಾಯಕ ಅಯಾಜ್ ಅಹಮದ್, ಮತ್ತು ಸಮಾಜ ಚಿಂತಕರು ಉಪಸ್ಥಿತರಿದ್ದರು.
