Featured, ಇತರೆ, ಸ್ಥಳೀಯ

ಕೇರಳ : ಸ್ಥಳೀಯಾಡಳಿತ ಚುನಾವಣೆ ಫಲಿತಾಂಶ — ಆಡಳಿತಾರೂಢ ಎಲ್‌ಡಿಎಫ್‌ಗೆ ಹಿನ್ನಡೆ, ಯುಡಿಎಫ್‌ಗೆ ಮುನ್ನಡೆ; ಆಪ್ ಭರವಸೆಯ ಆರಂಭ

ಶುದ್ಧ ರಾಜಕೀಯ, ಪರ್ಯಾಯ ಆಡಳಿತ ಮಾದರಿ ಮತ್ತು ಜನಕೇಂದ್ರಿತ ನೀತಿಗಳೊಂದಿಗೆ ಮುಂದುವರೆದಿರುವ ಆಮ್ ಆದ್ಮಿ ಪಕ್ಷಕ್ಕೆ ಕೇರಳದ ಜನತೆ ಹೊಸ ಆಶಾಭಾವನೆಯ ದಾರಿ ತೆರೆದಂತಾಗಿದೆ. ಈ ಚುನಾವಣಾ ಫಲಿತಾಂಶಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳ ಆರಂಭವನ್ನು ಸೂಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆಪ್ ಪಾತ್ರ ಮತ್ತಷ್ಟು ವಿಸ್ತಾರಗೊಳ್ಳುವ ಸೂಚನೆಗಳನ್ನು ನೀಡಿವೆ.

ಕೇರಳ, ಡಿಸೆಂಬರ್: 14
ನಿನ್ನೆ ಫಲಿತಾಂಶ ಘೋಷಣೆಯಾದ ಕೇರಳ ರಾಜ್ಯದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್‌ಗೆ ಸ್ಪಷ್ಟ ಹಿನ್ನಡೆ ಉಂಟಾಗಿದ್ದು, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಗಮನಾರ್ಹ ಪ್ರಾಬಲ್ಯ ಮೆರೆದಿದೆ.
ಈ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಕಣಕ್ಕಿಳಿದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ), ನಿರೀಕ್ಷಿಸಿದಷ್ಟು ಫಲಿತಾಂಶ ಗಳಿಸಲಿಲ್ಲವಾದರೂ, ತನ್ನ ಹಿಂದಿನ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆದು ರಾಜಕೀಯ ಅಸ್ತಿತ್ವವನ್ನು ಬಲಪಡಿಸಿದೆ. ಅದರೊಂದಿಗೆ, ಐತಿಹಾಸಿಕವಾಗಿ ಒಂದು ಮಹಾನಗರ ಪಾಲಿಕೆಯ ಆಡಳಿತವನ್ನು ಗಿಟ್ಟಿಸಿಕೊಳ್ಳುವಲ್ಲಿ ಎನ್‌ಡಿಎ ಯಶಸ್ವಿಯಾಗಿದೆ.
ಈ ನಡುವೆ, ಮೊದಲ ಬಾರಿಗೆ ಹಲವಾರು ವಾರ್ಡ್‌ಗಳಲ್ಲಿ ಸ್ಪರ್ಧೆಗಿಳಿದ ಆಮ್ ಆದ್ಮಿ ಪಕ್ಷ (ಆಪ್) ಕೇರಳ ರಾಜಕೀಯದಲ್ಲಿ ಭರವಸೆಯ ಹೆಜ್ಜೆ ಇಟ್ಟಿದೆ. ಕರಿಮ್ಕುನ್ನಂ ಗ್ರಾಮ ಪಂಚಾಯತ್‌ನ ವಾರ್ಡ್ 13ರಲ್ಲಿ ಬೀನಾ ಕುರಿಯನ್, ಮುಲ್ಲೆಂಕೊಳ್ಳಿ ಗ್ರಾಮ ಪಂಚಾಯತ್‌ನ ವಾರ್ಡ್ 16ರಲ್ಲಿ ಸಿನಿ ಆಂಟನಿ, ಹಾಗೂ ಉಝಾವೂರು ಗ್ರಾಮ ಪಂಚಾಯತ್‌ನ ವಾರ್ಡ್ 4ರಲ್ಲಿ ಸ್ಮಿತಾ ಲ್ಯೂಕ್ ಅವರು ಆಪ್ ಪರವಾಗಿ ವಿಜಯ ಪತಾಕೆ ಹಾರಿಸಿದ್ದಾರೆ. ಇನ್ನೂ ಹಲವು ಕ್ಷೇತ್ರಗಳಲ್ಲಿ ಅಲ್ಪ ಮತಾಂತರದಿಂದ ಆಪ್ ಅಭ್ಯರ್ಥಿಗಳು ಸೋಲು ಕಂಡರೂ, ಪಕ್ಷದ ಬೆಳವಣಿಗೆ ಮತ್ತು ಜನಬೆಂಬಲ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

Related Posts