ಮೊಗರ್ಪಣೆ: ಮುಹಿಯದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ (ಎಂಆರ್‌ಡಿಎ) ಮೊಗರ್ಪಣೆ ಘಟಕದ ನೂತನ ಕಾರ್ಯಕಾರಿ ಸಮಿತಿಯು ಇತ್ತೀಚೆಗೆ ರಚನೆಯಾಯಿತು. ಸಂಘದ ಅಧ್ಯಕ್ಷರಾಗಿ ಜಲೀಲ್ ಅವರು ಸತತ ಮೂರನೇ ಅವಧಿಗೆ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ರಶೀದ್ ಕೆ. ಯು ಹಾಗೂ ಜಬ್ಬಾರ್ (ಲ್ಯಾಂಡ್ ಲಿಂಕ್ಸ್) ಅವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಅಡ್ಕ ಅವರನ್ನು ನೇಮಕ ಮಾಡಲಾಯಿತು ಜತೆ ಕಾರ್ಯದರ್ಶಿಯಾಗಿ ಸಮೀರ್ ಎಚ್. ವೈ ಆಯ್ಕೆಯಾದರು ಖಜಾಂಜಿಯಾಗಿ ಅಬ್ದುಲ್ಲಾ ಹಾಜಿ ಅವರನ್ನು ಆಯ್ಕೆ ಮಾಡಲಾಯಿತು.
ದಫ್ ಉಸ್ತುವಾರಿಯಾಗಿ ಸಂಶುದ್ದೀನ್ ಎಂ ಅವರನ್ನು ನೇಮಕಗೊಳಿಸಲಾಯಿತು. ನಿರ್ದೇಶಕರಾಗಿ ಬಶೀರ್ ಕೆ. ಎಂ, ಹನೀಫ್ ಕಂಟ್ರಾಕ್ಟರ್, ಸಂಶುದ್ದೀನ್ ಹಲ್ಸ್, ಅಬ್ದುಲ್ಲಾ ಢಮ್, ಎಂ. ಮಹಮ್ಮದ್ ಹಾಗೂ ಕಬೀರ್ ಸೇರಿದಂತೆ ಇತರರು ಆಯ್ಕೆಯಾದರು.
ನವಸಂಪುಟದ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಸಂಘದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದರು.
