Featured, ಇತರೆ, ಸ್ಥಳೀಯ

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ರಿಂಗ್ ರಸ್ತೆ ಕಾಂಕ್ರಿಟೀಕರಣ ಲೋಕಾರ್ಪಣೆ – ಸ್ಥಳೀಯ ಸದಸ್ಯರಿಗೆ ಸನ್ಮಾನ

ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಸ್. ಉಮ್ಮರ್ ಅವರು ಸಾಮಾಜಿಕ ಕಳಕಳಿಯ ಜನಪ್ರತಿನಿಧಿ : ಶಶಿಕಲಾ ನೀರಬಿದಿರೆ

ಸುಳ್ಯ:
ಸುಳ್ಯ ನಗರದ ಹೃದಯಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣ ಹಾಗೂ ಆಟೋ ಪಾರ್ಕಿಂಗ್ ಮಧ್ಯದ ಪ್ರವೇಶ ರಸ್ತೆಯ ಪ್ರದೇಶವು ದೀರ್ಘಕಾಲದಿಂದ ದುರ್ಸ್ಥಿತಿಯಲ್ಲಿದ್ದುದನ್ನು ಮನಗಂಡು, ಸುಳ್ಯ ನಗರ ಪಂಚಾಯತ್ ವತಿಯಿಂದ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರಿಟೀಕರಣ ಕಾಮಗಾರಿಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಲೋಕಾರ್ಪಣೆಯ ಬಳಿಕ ಮಾತನಾಡಿದ ನಗರ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ನಗರದ ಪ್ರಮುಖ ಪ್ರದೇಶವನ್ನು ಸುಸಜ್ಜಿತಗೊಳಿಸುವ ಮೂಲಕ ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಸ್. ಉಮ್ಮರ್ ಅವರನ್ನು ಸಾಮಾಜಿಕ ಕಳಕಳಿಯ ಜನಪ್ರತಿನಿಧಿ ಎಂದು ಶ್ಲಾಘಿಸಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ಮಾತನಾಡಿ, ಸುಳ್ಯ ನಗರದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.


ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಕೆ.ಎಸ್. ಉಮ್ಮರ್, ಶರೀಫ್ ಕಂಠಿ, ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ರಶೀದ್ ಜಟ್ಟಿಪ್ಪಳ್ಳ, ಸ್ಥಳೀಯ ಉದ್ಯಮಿಗಳಾದ ರಜಾಕ್ ಹಾಜಿ (ಶೀತಲ್), ನಾಗೇಶ್ (ಹಮೀದ್ ಸಮ್ಮರ್ ಕೂಲ್), ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸುಂದರ್, ಗುರೂಜಿ ಬಸ್ ಮಾಲಕ ಮೋಹನ್, ಟೂರ್ ಆಪರೇಟರ್ಸ್ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಈ ಸಂದರ್ಭ ಸ್ಥಳೀಯ ನಗರ ಪಂಚಾಯತ್ ಸದಸ್ಯರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೆ.ಎಸ್. ಉಮ್ಮರ್ ಅವರನ್ನು ಸ್ಥಳೀಯ ನಾಗರಿಕರು, ಉದ್ಯಮಿಗಳು ಹಾಗೂ ಆಟೋ ಮಾಲಕರ–ಚಾಲಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

Related Posts