ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಮಯವಾಗಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿಗೆ ತಲುಪಿದ್ದಾರೆ.
ಕೆ.ಎಸ್.ಆರ್.ಟಿ.ಸಿ ವತಿಯಿಂದ ಮೆಸ್ಕಾಂಗೆ ವಿದ್ಯುತ್ ಬಿಲ್‌ನ ಮುಂಗಡ ಪಾವತಿ ಮಾಡದ ಹಿನ್ನೆಲೆಯಲ್ಲಿ, ಇಂದು ಮೆಸ್ಕಾಂ ಸಿಬ್ಬಂದಿಗಳು ಬಸ್ ನಿಲ್ದಾಣದ ವಿದ್ಯುತ್ ಪೀಸ್‌ಗಳನ್ನು ಕಳಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ನಿಲ್ದಾಣದ ದೀಪಗಳು ಆರಿದ್ದು, ಪ್ರಯಾಣಿಕರು ಕತ್ತಲಲ್ಲಿ ಕುಳಿತು ಬಸ್‌ಗಾಗಿ ಕಾಯುವಂತಾಗಿದೆ.
ಈ ಕುರಿತು ಸುಳ್ಯ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ, “ಸ್ವಲ್ಪ ಮುಂಗಡ ಹಣ ಮೆಸ್ಕಾಂಗೆ ಪಾವತಿಸಬೇಕಿದೆ. ಅದಕ್ಕಾಗಿ ಅವರು ಪೀಸ್ ಕಳಚಿಕೊಂಡು ಹೋಗಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಹಣ ಪಾವತಿ ಆದ ಬಳಿಕ ಬೆಳಕು ಮತ್ತೆ ಬರುವ ನಿರೀಕ್ಷೆಯಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದೀಗ ಪ್ರಯಾಣಿಕರು, “ಟಿಕೆಟ್ ಬೆಲೆ ಏರಿದರೂ ಬೆಳಕು ಕಡಿಮೆಯಾಗಬಾರದು” ಎಂದು ನಗುಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

