Featured, ಇತರೆ, ಸ್ಥಳೀಯ

ಯುಎಇಯ ಅಬುಧಾಬಿಯಲ್ಲಿ ನಾಲ್ಕು ದಶಕಗಳ ಸೇವಾ ಪರಂಪರೆ ಹೊಂದಿದ ಡೆಲ್ಮಾ ಮಾರ್ಟ್: ಇದರ ನೂತನ ಶಾಖೆ ಇಂದು ಸುಳ್ಯದಲ್ಲಿ ಉದ್ಘಾಟನೆ

“ನಾಲ್ಕು ದಶಕಗಳ ವಿಶ್ವಾಸದ ಪರಂಪರೆಯನ್ನು ಸುಳ್ಯದಲ್ಲಿಯೂ ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಗ್ರಾಹಕರ ತೃಪ್ತಿಯೇ ನಮ್ಮ ಮೊದಲ ಆದ್ಯತೆ,” ಶಾಹು.ಡೆಲ್ಮ

ಸುಳ್ಯ: ಯುಎಇಯ ಅಬುಧಾಬಿಯಲ್ಲಿ ನಾಲ್ಕು ದಶಕಗಳ ಕಾಲ ವಿಶ್ವಾಸಾರ್ಹ ಸೇವೆ ಸಲ್ಲಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಡೆಲ್ಮಾ ಮಾರ್ಟ್. ಗ್ರಾಹಕರಿಗೆ ಗುಣಮಟ್ಟ, ನ್ಯಾಯಸಮ್ಮತ ಬೆಲೆ ಮತ್ತು ಸ್ನೇಹಪೂರ್ಣ ಸೇವೆ ನೀಡುವುದನ್ನು ಧ್ಯೇಯವಾಗಿಸಿಕೊಂಡಿರುವ ಈ ಸಂಸ್ಥೆ, ಇದೀಗ ಸುಳ್ಯ ನಗರದಲ್ಲಿ ತನ್ನ ನೂತನ ಶಾಖೆಯನ್ನು ರಾಜ್ಯದಲ್ಲಿ ಖ್ಯಾತಿ ಹೊಂದಿದ ಓಲ್ ಟೌನ್ಸ್ ಸೂಪರ್ ಮಾರ್ಕೆಟ್ ಸರಣಿಯ ಸಹಭಾಗಿತ್ವದಲ್ಲಿ ಇಂದು ಸ್ಥಳೀಯರ ನಿರೀಕ್ಷೆಗೆ ತಕ್ಕಂತೆ ಆಧುನಿಕ ಸೌಲಭ್ಯಗಳೊಂದಿಗೆ ಉದ್ಘಾಟನೆಗೆ ಸಜ್ಜಾಗಿದೆ ನಾಳೆ ನಡೆಯಲಿರುವ ಉದ್ಘಾಟನಾ ಸಮಾರಂಭ ಅಂಗವಾಗಿ ಮೊದಲ 200 ಗ್ರಾಹಕರಿಗೆ ಕ್ರಾಕರಿ ಸೆಟ್ (ಪಾತ್ರೆ ಸೆಟ್) ಉಚಿತವಾಗಿ ನೀಡಲಾಗುತ್ತಿದೆ ಎಂದು ಎಂದು ಸಂಸ್ಥೆ ಪ್ರಕಟಿಸಿದೆ.

ಇಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಹಾಗೂ ವ್ಯಾಪಾರ ವಲಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸುಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶದ ಜನತೆಗೆ ಅಂತರರಾಷ್ಟ್ರೀಯ ಮಟ್ಟದ ಖರೀದಿ ಅನುಭವವನ್ನು ಒದಗಿಸುವ ಉದ್ದೇಶದಿಂದ ಆರಂಭವಾಗುತ್ತಿರುವ ಈ ನೂತನ ಶಾಖೆ, ಸ್ಥಳೀಯ ಆರ್ಥಿಕ ಚಟುವಟಿಕೆಗೆ ಮತ್ತಷ್ಟು ಚೈತನ್ಯ ತುಂಬುವ ನಿರೀಕ್ಷೆಯಿದೆ. “ನಾಲ್ಕು ದಶಕಗಳ ವಿಶ್ವಾಸದ ಪರಂಪರೆಯನ್ನು ಸುಳ್ಯದಲ್ಲಿಯೂ ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಗ್ರಾಹಕರ ತೃಪ್ತಿಯೇ ನಮ್ಮ ಮೊದಲ ಆದ್ಯತೆ,” ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

 

 ಗ್ರಾಹಕರಿಗೆ ವಿಶೇಷ ಸೌಲಭ್ಯಗಳು

ನಾಳೆ (25/02/2026) ಉದ್ಘಾಟನಾ ಸಮಾರಂಭ ಅಂಗವಾಗಿ ಮೊದಲ 200 ಗ್ರಾಹಕರಿಗೆ ಕ್ರಾಕರಿ ಸೆಟ್ (ಪಾತ್ರೆ ಸೆಟ್) ಉಚಿತವಾಗಿ ನೀಡಲಾಗುತ್ತಿದೆ

ದಿನನಿತ್ಯದ ಅಗತ್ಯ ವಸ್ತುಗಳ ವಿಶಾಲ ಸಂಗ್ರಹ

ತಾಜಾ ಹಣ್ಣು-ತರಕಾರಿ ಮತ್ತು ಗೃಹೋಪಯೋಗಿ ಸಾಮಗ್ರಿಗಳು

ಅಂತರರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳು

ಸ್ಪರ್ಧಾತ್ಮಕ ದರಗಳು ಮತ್ತು ಹಬ್ಬದ ಆಫರ್‌ಗಳು, ಆರಾಮದಾಯಕ ಖರೀದಿ ವಾತಾವರಣ

ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ವಿತರಣೆ: “ಓಲ್ ಟೌನ್ಸ್” ಸಮೂಹ ಸಂಸ್ಥೆಯ ವಿಶಿಷ್ಟ ಕಾರ್ಯಪದ್ಧತಿ

ರಾಜ್ಯಾದ್ಯಂತ ಪಕ್ಕಾ ಸ್ವದೇಶಿ ನಿಯಮವನ್ನು ಅನುಸರಿಸುತ್ತಿರುವ “ಓಲ್ ಟೌನ್ಸ್” ಸಮೂಹ ಸಂಸ್ಥೆ ಉತ್ಪಾದಕರಿಂದ ನೇರವಾಗಿ ಬಳಕೆದಾರರಿಗೆ ವಸ್ತುಗಳನ್ನು ವಿತರಿಸುವ ವಿಶಿಷ್ಟ ವ್ಯವಸ್ಥೆಯನ್ನು ರೂಪಿಸಿದೆ. ಮಧ್ಯವರ್ತಿಗಳಿಲ್ಲದ ಸರಳ ವಿತರಣಾ ಕ್ರಮದ ಮೂಲಕ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಸಮಂಜಸ ದರದಲ್ಲಿ ಒದಗಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಸಾವಿರಕ್ಕೂ ಅಧಿಕ ಉತ್ಪಾದನಾ ಸಂಸ್ಥೆಗಳೊಂದಿಗೆ ನೇರ ಒಪ್ಪಂದ ಹಾಗೂ ಸಹಭಾಗಿತ್ವ ಹೊಂದಿರುವ “ಓಲ್ ಟೌನ್ಸ್” ತನ್ನ ವ್ಯಾಪಾರ ವಹಿವಾಟನ್ನು ಸುವ್ಯವಸ್ಥಿತವಾಗಿ ರೂಪಿಸಿಕೊಂಡಿದೆ. ಉತ್ಪಾದನಾ ಸಂಸ್ಥೆಗಳು ಮತ್ತು ಸಾಮಾನ್ಯ ಗ್ರಾಹಕರ ನಡುವಿನ ನೇರ ಕೊಂಡಿಯಾಗಿ ಕಾರ್ಯನಿರ್ವಹಿಸುವುದರಿಂದ, ಗ್ರಾಹಕರಿಗೆ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ವಸ್ತುಗಳನ್ನು ಖರೀದಿಸುವ ಅವಕಾಶ ದೊರೆಯುತ್ತಿದೆ.
ಈ ಕಾರ್ಯಪದ್ಧತಿಯಿಂದಾಗಿ ಗ್ರಾಹಕರು “ಡೆಲ್ಮಾ ಮಾರ್ಟ್” ನಲ್ಲಿ ಗುಣಮಟ್ಟದ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಉತ್ಪಾದಕರಿಗೂ ಹಾಗೂ ಗ್ರಾಹಕರಿಗೂ ಪರಸ್ಪರ ಲಾಭದಾಯಕ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ “ಓಲ್ ಟೌನ್ಸ್” ಪ್ರಮುಖ ಪಾತ್ರ ವಹಿಸುತ್ತಿದೆ.

Related Posts