Featured, ಇತರೆ, ಸ್ಥಳೀಯ

ಸುಳ್ಯ ತಾಲ್ಲೂಕು ಸಮಸ್ತ ಸಂಯುಕ್ತ ಜಮಾ ಅತ್ ವತಿಯಿಂದ ರಂಜಾನ್ ಕಿಟ್ ವಿತರಣೆ

80 ಅರ್ಹ ಕುಟುಂಬಗಳಿಗೆ ಆಹಾರ ಕಿಟ್ – “ಅರ್ಹರಿಗೆ ತಲುಪುವಂತೆ ಎಚ್ಚರಿಕೆ ಅಗತ್ಯ” : ಟಿ.ಎಂ. ಶಾಹಿದ್ ತೆಕ್ಕಿಲ್

ಸುಳ್ಯ, ಮಾ.1: ಸುಳ್ಯ ತಾಲ್ಲೂಕು ಸಮಸ್ತ ಸಂಯುಕ್ತ ಜಮಾ ಅತ್ ವತಿಯಿಂದ ರಂಜಾನ್ ಪ್ರಯುಕ್ತ ಆಹಾರ ಕಿಟ್ ವಿತರಣೆ ಕಾರ್ಯಕ್ರಮವು ಸುಳ್ಯದ ಸುಪ್ರೀಂ ಹಾಲ್‌ನಲ್ಲಿ ನಡೆಯಿತು. ತಾಲ್ಲೂಕಿನ 15 ಜಮಾ ಅತ್‌ಗಳ 80 ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಸಮಸ್ತ ಸಂಯುಕ್ತ ಜಮಾ ಅತ್ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ಹಮೀದ್ ಹಾಜಿ ದುವಾ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಆಹಾರ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. “ನಾವು ವಿತರಿಸುವ ಕಿಟ್‌ಗಳು ನಿಜವಾದ ಅರ್ಹ ಕುಟುಂಬಗಳಿಗೆ ತಲುಪಬೇಕು. ದುರುಪಯೋಗವಾಗದಂತೆ ಸಂಘಟಕರು ಎಚ್ಚರ ವಹಿಸಬೇಕು. ಮುಂದಿನ ವರ್ಷ ಇನ್ನಷ್ಟು ಕುಟುಂಬಗಳಿಗೆ ಸಹಾಯ ಮಾಡುವಂತಾಗಲಿ” ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮೊಹಮ್ಮದ್, ಸಂಪಾಜೆ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹಮಿದಿಯಾ, ಪೈಂಬಚ್ಚಾಲ್ ಜುಮಾ ಮಸೀದಿ ಅಧ್ಯಕ್ಷ ಸಿ.ಎಚ್. ಮೊಹಮ್ಮದ್, ಐವರ್ನಾಡು ಜುಮಾ ಮಸೀದಿ ಅಧ್ಯಕ್ಷ ಶರೀಫ್, ದುಗಲಡ್ಕ ಜುಮಾ ಮಸೀದಿ ಕಾರ್ಯದರ್ಶಿ ಹಂಸ ಅಜ್ಮಿರ್, ಪೇರಡಕ್ಕ ಜುಮಾ ಮಸೀದಿ ಕಾರ್ಯದರ್ಶಿ ಕೆ.ಎಂ. ಇಸ್ಮಾಯಿಲ್, ಅರಂತೋಡು ಜುಮಾ ಮಸೀದಿ ಕೋಶಾಧಿಕಾರಿ ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ಸಂಯುಕ್ತ ಜಮಾ ಅತ್ ಸಂಘಟನಾ ಕಾರ್ಯದರ್ಶಿ ಜಮಾಲ್ ಬೆಳ್ಳಾರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಸ್ತ ನೇತಾರರಾದ ಹಾಜಿ ಅಹಮದ್ ಸುಪ್ರೀಂ, ಹಾಜಿ ಅಹಮದ್ ಪಾರೆ, ಅಬೂಬಕ್ಕರ್ ಐವರ್ನಾಡು, ಹಾಜಿ ಅಬ್ದುಲ್ ಖಾದರ್ ಅಜ್ಜಾವರ, ಶರೀಫ್ ರಿಲ್ಯಾಕ್ಸ್, ಎ.ಬಿ. ಮೊಯಿದಿನ್ ಕಳಂಜ, ಸಿನಾನ್ ದರ್ಕಾಸ್ ಪೇರಡ್ಕ, ಅಬ್ದುಲ್ಲ ಕನಕಮಜಲು, ಇಸ್ಮಾಯಿಲ್ ಸಂಪಾಜೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

 

Related Posts