Featured, ಇತರೆ, ಸ್ಥಳೀಯ

ಐಷಾರಾಮಿ ಫ್ಲಾಟ್‌ನಲ್ಲಿ ಅಂತರಾಷ್ಟ್ರೀಯ ಡ್ರಗ್ ಜಾಲ ಪತ್ತೆ: 10 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ : ಇಬ್ಬರ ಬಂಧನ

ಕರ್ನಾಟಕದಲ್ಲೇ ಮೊದಲ ಬಾರಿಗೆ ಭಾರೀ ಪ್ರಮಾಣದ ಎಲ್‌ಎಸ್‌ಡಿ ವಶ 

ಬೆಂಗಳೂರು, ಮಾ.3: ಐಷಾರಾಮಿ ಜೀವನ ಶೈಲಿಯಲ್ಲಿ ಕಾಣಿಸಿಕೊಂಡಿದ್ದ ಯುವಕ-ಯುವತಿಯರ ಅಸಲಿ ಮುಖವನ್ನು ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಬಯಲಿಗೆಳೆದಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ೊಂದರ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, ಅಂತರಾಷ್ಟ್ರೀಯ ಡ್ರಗ್ ಜಾಲದ ಸಂಪರ್ಕದ ಕುರಿತು ಸ್ಫೋಟಕ ಮಾಹಿತಿ ಹೊರಬಂದಿದೆ.
ಬಾಗಲೂರು ಪ್ರದೇಶದಲ್ಲಿರುವ ಪ್ರೆಸ್ಟೀಜ್ ಫಿನ್ಸ್‌ಬರಿ ಪಾರ್ಕ್, ಅಪಾಟ್೯ಮೆಂಟ್ ನಲ್ಲಿ  ಐಷಾರಾಮಿ ಜೀವನ ಶೈಲಿಯಲ್ಲಿ ಕಾಣಿಸಿಕೊಂಡಿದ್ದ ಯುವಕ-ಯುವತಿಯರ ಅಸಲಿ ಮುಖವನ್ನು ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಬಯಲಿಗೆಳೆದಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ೊಂದರ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, ಅಂತರಾಷ್ಟ್ರೀಯ ಡ್ರಗ್ ಜಾಲದ ಸಂಪರ್ಕದ ಕುರಿತು ಸ್ಫೋಟಕ ಮಾಹಿತಿ ಹೊರಬಂದಿದೆ.
ಬಾಗಲೂರು ಪ್ರದೇಶದಲ್ಲಿರುವ ಪ್ರೆಸ್ಟೀಜ್ ಫಿನ್ಸ್‌ಬರಿ ಪಾರ್ಕ್ ಅಪ ರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಈ ಅಕ್ರಮ ಚಟುವಟಿಕೆ ಪತ್ತೆಯಾಗಿದೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂಬವರನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಲಿಂಗ್‌ನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಆರೋಪಿಗಳು ಯಾವುದೇ ಅನುಮಾನ ಮೂಡದಂತೆ ಐಷಾರಾಮಿ ವಾಸ್ತವ್ಯ ಹೊಂದಿ ಅಕ್ರಮ ವ್ಯವಹಾರ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತನಿಖೆಯ ವೇಳೆ ಡ್ರಗ್ ಜಾಲವು ಅಂತರಾಷ್ಟ್ರೀಯ ಮಟ್ಟದ ಸಂಪರ್ಕ ಹೊಂದಿರುವುದು ಬಹಿರಂಗವಾಗಿದೆ. ಥೈಲ್ಯಾಂಡ್ ಮೂಲದ ವಿನ್ಸೆಂಟ್ ಎಂಬಾತ ಈ ಜಾಲದ ಮಾಸ್ಟರ್‌ಮೈಂಡ್ ಆಗಿದ್ದು, ವಿಮಾನಗಳ ಮೂಲಕ ಹಂತ ಹಂತವಾಗಿ ಡ್ರಗ್ಸ್‌ಗಳನ್ನು ಬೆಂಗಳೂರಿಗೆ ರವಾನಿಸುತ್ತಿದ್ದ ಎನ್ನಲಾಗಿದೆ. ಅವನ ಸೂಚನೆಗಳ ಮೇರೆಗೆ ಅಶ್ವಿನ್ ಮತ್ತು ಮೊಬಿನಾ ಮಾದಕ ವಸ್ತುಗಳನ್ನು ಸ್ವೀಕರಿಸಿ ನಗರದಲ್ಲಿನ ಗ್ರಾಹಕರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲೇ ಭಾರೀ ಪ್ರಮಾಣದ 8,335 ಎಲ್‌ಎಸ್‌ಡಿ ಸ್ಟ್ರಿಪ್ಸ್ ವಶಪಡಿಸಲಾಗಿದೆ. ಪ್ರತಿ ಸ್ಟ್ರಿಪ್‌ ಬೆಲೆ ಸುಮಾರು 6,000 ರೂಪಾಯಿ ಎನ್ನಲಾಗಿದ್ದು, ದೇವತೆಗಳ ಚಿತ್ರಗಳು ಹಾಗೂ ಕಲಾಕೃತಿಗಳ ರೂಪದಲ್ಲಿ ಮುದ್ರಿಸಿ ಅನುಮಾನ ಬಾರದಂತೆ ಮಾರಾಟ ಮಾಡಲಾಗುತ್ತಿತ್ತು. ಇದರ ಜೊತೆಗೆ 534 ಗ್ರಾಂ ಚರಸ್ ಹಾಗೂ 5 ಕೆಜಿ ಹೈಡೋ ಗಾಂಜಾವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಡ್ರಗ್ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಅಕ್ರಮ ವ್ಯವಹಾರಕ್ಕೆ ಬಳಸಲಾದ ಫ್ಲಾಟ್‌ನ ಮಾಲೀಕನ ಪಾತ್ರದ ಕುರಿತೂ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ

Related Posts